|ದೇವತೆ-ದೈತ್ಯರಿಂದ ಸಮುದ್ರ ಮಂಥನ|
ಸ್ವಯಂಭು ಮನ್ವಂತರ, ಸ್ವಾರತೀಶ , ಉತ್ತಮ, ತಾಪಾಸ, ರೈವತ, ಚಾಕ್ಷುಷ ಸೇರಿ 14 ಮನ್ವಂತರಗಳನ್ನು ಭಗವಂತ ನಿರ್ಮಿಸಿ ಸ್ವಾರತೀಶ ಮನ್ವಂತರದಲ್ಲಿ
ವಿಭು, ಉತ್ತಮದಲ್ಲಿ ಸತ್ಯಸೇನಾ, ರೈವತ ದಲ್ಲಿ ವೈಕುಂಠ ನಾಮದಿಂದ, ಚಾಕ್ಷುಷ ಮನ್ವಂತರದಲ್ಲಿ ಅಜೀತನಾಗಿ ಭಗವಂತ ಅವತರಿಸಿದ್ದಾನೆ. ತಾಪಸ ಮನ್ವಂತರದಲ್ಲಿ ಗಜೇಂದ್ರನಿಗೆ ಮೋಕ್ಷ ನೀಡಿದ್ದಾನೆ. ಚಾಕ್ಷುಷ ಮನ್ವಂತರದಲ್ಲಿ ದೇವತೆಗಳಿಗೆ ಅಮೃತ ಪಾನ ಮಾಡಿಸಿದ್ದಾನೆ.
ನಾಲ್ಕು ಕಾಲಚಕ್ರವಾದಾಗ ಒಂದು ಮಹಾಯುಗವಾಗುತ್ತೆ ಅಂಥ 71 ಮಹಾಯುಗ ಕಳೆದರೆ ಒಂದು ಮನ್ವಂತರವಾಗುತ್ತದೆ. ಈಗ ಏಳನೇಯದು ವೈವಸ್ವತ ಮನ್ವಂತರ.
ನೀರು ಕುಡಿಬೇಕೆಂದು ಗಜೇಂದ್ರನ ಪಡೆ ಸರೋವರದಲ್ಲಿ ಬಂದಿವೆ. ಆಗ ಗಜೇಂದ್ರನ ಕಾಲಿಗೆ ಮೊಸಳೆ ಹಿಡಿಯಿತು. ಬಿಡಿಸಿಕೊಳ್ಳಲು ಆನೆಯಿಂದ ಆಗುತ್ತಿಲ್ಲ. ಅನೇಕ ವರ್ಷಹೀಗೆ ನಡೆಯಿತು. ಗಜೇಂದ್ರ ಭಗವಂತನ ಸ್ಮರಣೆ ಮಾಡಿದ. ಗರುಢಾರೂಢನಾಗಿ ಬಂದ ಭಗವಂತ ಮೊಸಳೆಯನ್ನು ಸಂಹರಿಸಿ, ಗಜೇಂದ್ರನಿಗೆ ಉದ್ಧರಿಸಿದ್ದಾನೆ. ಸಾಕಷ್ಟು ಆನೆಗಳಿದ್ದರೂ ಒಂದು ಸಹಾಯಕ್ಕೆ ಬಂದಿರಲಿಲ್ಲ.
ಬ್ರಹ್ಮದೇವರ ಸಭೆಯಲ್ಲಿ ನರ್ತನೆ ಮಾಡುವ ಆಹಾ ಗಂಧರ್ವ,ಉಹೂ ಗಂಧರ್ವರೇ ಈ ಆನೆ , ಮೊಸಳೆ. ದೇವ ಋಷಿಗಳು ಸರೋವರದಲ್ಲಿ ಸ್ನಾನಕ್ಕೆ ಬಂದಾಗ ಇವರು ಒಬ್ಬರು ಆನೆಯಾಗಿ ಇನ್ನೊಬ್ಬರು ಮೊಸಳೆಯಾಗಿ ಋಷಿಯನ್ನು ಚೇಷ್ಟೆ ಮಾಡಿದ್ದರ ಫಲವಾಗಿ ಆನೆ, ಮೊಸಳೆಯಾಗಿ ಜನಿಸಿದ್ದರು.
ಗ ಎಂದರೆ ಸಾವು, ಜ ಎಂದರೆ ಜನಿಸು ಎಂದರ್ಥ. ನಾವು ಕೂಡ ಗಜ ಇದ್ದಂತೆ. ಆ ಗಜನಿಗೆ ಒಂದೆ ಮೊಸಳೆ ಕಾಟವಿದ್ದರೆ, ನಮಗೆ ಪ್ರೀತಿ, ವ್ಯಾಮೋಹ, ಸಂಬಂಧ ಗಳೆಂಬ ಅನೇಕ ಮೊಸಳೆಗಳು ನಮ್ಮ ಕಾಲು ಹಿಡಿದು ಜಗ್ಗುತ್ತಿವೆ. ಬಂಧುಗಳಿದ್ದರೂ ನಮ್ಮ ಸಹಾಯಕ್ಕೆ ಬರುವುದಿಲ್ಲ.
ಭಗವಂತನ ಉಪಾಸನೆ ಮಾಡಿ ಸಂಸಾರ ಎಂಬ ಮೊಸಳೆಯಿಂದ ಬಿಡಿಸಿಕೊಳ್ಳಬೇಕು.
ನಮಗೆ ಸಾಕಷ್ಟು ಬಂಧುಗಳಿದ್ದಾರೆ. ನಾವು ಅನುಭವಿಸುವ ಕಷ್ಟವನ್ನು ನೋಡಿ ಮರಗುತ್ತಾರೆ ವಿನಹ ಅವರಿಂದ ಪರಿಹರಿಸುವುದು ಆಗುವುದಿಲ್ಲ. ಸಂಸಾರದ ಜಂಜಾಟದಿಂದ ಹೊರಗೆ ಬಂದು ಭಗವಂತ ಕಾಪಾಡು ಎಂದು ಪ್ರಾರ್ಥಿಸಿದರೆ ನಮ್ಮನ್ನು ರಕ್ಷಿಸುತ್ತಾನೆ. ನಮಗೆ ನಮ್ಮ ಬಂಧುಗಳೆ ಆಧಾರರು ಎಂದು ಭಾವಿಸಬಾರದು ಎಂಬುದನ್ನು ಈ ಕತೆ ತಿಳಿಸಿಕೊಡುತ್ತದೆ.
0 Comments