Header Ads Widget

ॐ GSB Madhva Bhramins ॐ

ಪಿಬತ ಭಾಗವತಂ ರಸಮಾಲಯಂ




 |ಪಿಬತ ಭಾಗವತಂ ರಸಮಾಲಯಂ|

ದೂರ್ವಾಸ ಮುನಿಗಳು ನೀಡಿದ ವಿಷ್ಣು ನಿರ್ಮಾಲ್ಯದ ಹಾರವನ್ನುಇಂದ್ರ ದೇವರು ತನ್ನ ವಾಹನವಾದ ಐರಾವತಕ್ಕೆ ಕೊಟ್ಟು ಅದಕ್ಕೆ ಅವಮಾನ ಮಾಡುತ್ತಾರೆ.

ಕೋಪಗೊಂಡ ರುದ್ರಾಂಶರಾದ ದೂರ್ವಾಸ ಮುನಿಗಳು ಶಾಪವನ್ನು ಕೊಡುತ್ತಾರೆ .

"ನಿನ್ನ ಸಕಲ ಐಶ್ವರ್ಯ ನಷ್ಟ ಅಗಲಿ ಎಂದು.ಅದರಂತೆ ಸಕಲ ಐಶ್ವರ್ಯ ನಷ್ಟವಾಗಿ ರಾಜ್ಯಭ್ರಷ್ಟವಾಗಿ ಇಂದ್ರ ದೇವರು ಬಹು ಕಷ್ಟ ಪಟ್ಟರು.

ಆ ನಂತರ ಭಗವಂತನ ಅನುಗ್ರಹದಿಂದ ಮತ್ತೆ ಹಿಂತಿರುಗಿ ಪಡೆದರು.

ಇದರ ಹಿನ್ನೆಲೆ ಇಷ್ಟೇ..

ಶ್ರೀಹರಿಯ ನಿರ್ಮಾಲ್ಯ ಮತ್ತು ಶ್ರೀಹರಿಯ ಪ್ರಸಾದವನ್ನು ಅಪಮಾನಿಸುವದು ನಮ್ಮ ಅಧಃಪತನಕ್ಕೆ ಕಾರಣ ಎನ್ನುವ ಜ್ಞಾನ ನಮಗೆ ಬರಬೇಕು.

ಶ್ರೀ ಮದ್ಭಾಗವತ ಇಂತಹ ಅನೇಕ ಸೂಕ್ಷ್ಮ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ನಿತ್ಯದಲ್ಲಿ ಶ್ರೀ ಮದ್ಭಾಗವತದ ಇಡೀ ಗ್ರಂಥ ಓದಲು ಆಗದೇ ಇದ್ದರು ,ಕೊನೆಯಲ್ಲಿ ಒಂದು ಶ್ಲೋಕ,ಅದು ಸಹ ಆಗದೇ ಇದ್ದರೆ  ಆ ಶ್ಲೋಕದ ಕಾಲುಭಾಗ ಕಿವಿಗೊಟ್ಟು ಭಕ್ತಿ ಇಂದ ಕೇಳಿದರು ಸರಿ.

"ಸಾವಿರ ಗೋದಾನದ ಫಲ."

"ಶ್ರೀ ಹರಿಯ ಪ್ರೀತಿ ಎಂಬ ದೊಡ್ಡ ಉಡುಗೊರೆ ಸಾಧಕರಿಗೆ.

ಇಂತಹ ಕಾಲು ಭಾಗದಿಂದಲೇ ನಮ್ಮನ್ನು ಕಾವಲು ಮತ್ತು ನಮ್ಮ ತಲೆ  ಕಾಯುವ ಮತ್ತು ನಮ್ಮ ತಲೆಮಾರುಗಳನ್ನು ರಕ್ಷಣೆ ಮಾಡುವ ಶ್ರೀ ಮದ್ಭಾಗವತಕ್ಕೆ ಕ ಎಣೆಯುಂಟೆ??

🙏ಶ್ರೀ ಕೃಷ್ಣಾರ್ಪಣಮಸ್ತು🙏

Post a Comment

0 Comments