ಭಾಗವತಸಾರ
ಒಂದು ದಿನ ಇಂದ್ರ ಐರಾವತದ ಮೇಲೆ ಹೋಗುತ್ತಿರುವಾಗ ದುರ್ವಾಸ ಮುನಿ ಬರುತ್ತಾರೆ. ದುರ್ವಾಸರು ನೀಡಿದ ನಿರ್ಮಾಲ್ಯವನ್ನು ಇಂದ್ರ ಆನೆ ಕೊರಳಿಗೆ ಹಾಕಿದ್ದಾನೆ. ಆನೆಯೂ ಅದನ್ನು ಕಾಲಲ್ಲಿ ತುಳಿಯಿತು. ಐಶ್ವರ್ಯ ನಾಶವಾಗಲಿ ಎಂದು ದುರ್ವಾಸರು ಶಾಪ ಕೊಟ್ಟಿದ್ದಾರೆ. ಬಲಿ ಇಂದ್ರಲೋಕವನ್ನು ವಶಪಡಿಸಿಕೊಂಡಿದ್ದಾನೆ. ಆಗ ದೇವತೆಗಳು ಭಗವಂತನ ಮೋರೆ ಹೋಗಿದ್ದಾರೆ. ದೈತ್ಯರೊಂದಿಗೆ ಸಂಧಾನ ಮಾಡಿಕೊಂಡು ಸಮುದ್ರ ಮಂಥನ ಮಾಡಿ ಅಮೃತ ಸೇವಿಸಿ ದೈತ್ಯರನ್ನು ನಾಶ ಮಾಡಿರಿ ಎಂದು ಭಗವಂತ ಹೇಳಿದ.
ದೇವತೆಗಳಿಗೆ ಪರ್ವತ ಎತ್ತಲು ಆಗಲಿಲ್ಲ. ಭಗವಂತ ಗರುಡನ ಮೇಲೆ ಪರ್ವತ ಇಟ್ಟಿದ್ದಾನೆ. ಗರುಡ ಸಮುದ್ರ ಮಧ್ಯೆದಲ್ಲಿ ಪರ್ವತವನಿಟ್ಟಿದ್ದಾನೆ. ಆ ಪರ್ವತಕ್ಕೆ ರುದ್ರ ದೇವರ ವರ ಇದ್ದಿತು. ಅದಕ್ಕೆ ದೇವತೆಗಳಿಂದ ಎತ್ತಲು ಆಗಲಿಲ್ಲ. ವಾಸುಕಿ ಎಂಬ ಸರ್ಪವನ್ನು ಪರ್ವತಕ್ಕೆ ಕಟ್ಟಿ ಮಂಥನ ಪ್ರಾರಂಭಿಸಿದ್ದಾರೆ. ಮೊದಲಿಗೆ ದೇವತೆಗಳು ವಾಸುಕಿಯ ತಲೆ ಕಡೆ ನಿಂತಿದ್ದಾರೆ. ದೈತ್ಯರು ನಾವು ತಲೆಕಡೆ
ನಿಲ್ಲುತ್ತೇವೆ ಎಂದು ವಾದಿಸಿದಾಗ ದೈತ್ಯರು ತಲೆಕಡೆ ನಿಂತಿದ್ದಾರೆ. ವಾಸುಕಿ ಸಿಟ್ಟಿನಿಂದ ಹೊರಹಾಕಿದ ವಿಷ ತಾಗಿ ದೈತ್ಯರು ಮೂರ್ಛೆ ಹೋಗುತ್ತಿದ್ದಾರೆ. ವಿಷ ದೇವತೆಗಳಿಗೆ ತಾಗದಂತೆ ಭಗವಂತ ರಕ್ಷಿಸಿದ್ದಾನೆ. ಪರ್ವತ ನೀರಲ್ಲಿ ಮುಳಗತೊಡಗಿತು. ಆಗ ಭಗವಂತ ಕೂರ್ಮಾವಾತರ ದಿಂದ ಪರ್ವತ ಎತ್ತಿ ಹಿಡಿದ. ಮಂಥನ ಜೋರಾಗಿ ನಡೆದಿದೆ. ಆದರೂ ಭಗವಂತನಿಗೆ ಯಾವ ಪರಿಣಾಮ ಬೀರಲಿಲ್ಲ. ಭಗವಂತ ಜೋರಾಗಿ ಶ್ವಾಸ ಬಿಟ್ಟಿದ್ದರಿಂದ ಸುನಾಮಿಯಂಥ ಅಲೆಗಳು ಬರತೊಡಗಿದವು. ಆ ರಭಸಕ್ಕೆ ಪರ್ವತ ಮೇಲಕ್ಕೆ ಹೋಗತೊಡಗಿತು. ಭಗವಂತ ಸಹಸ್ರ
ಭಾಹುದಿಂದ ಪರ್ವತವನ್ನು ಹಿಡದಿದ್ದಾನೆ. ಮೊದಲು ಬಂದ ಕಾಮಧೇನು ದೈತ್ಯರು, ಐರಾವತ ದೇವತೆಗಳು ಪಡೆದಿದ್ದಾರೆ. ನಂತರ ಸಮುದ್ರದಲ್ಲಿ ಮಹಾ ಲಕ್ಷ್ಮಿಬಂದಳು. ಅವಳನ್ನು ಯಾರು ಪಡೆಯಬೇಕು ಎಂದು ಸ್ವಯಂವರ ಏರ್ಪಡಿಸಿದ್ದಾರೆ. ಎಲ್ಲರಲ್ಲಿ ಒಂದೊಂದು ದೋಷ ಹುಡುಕಿ ನಾರಾಯಣನನ್ನು ವರಿಸಿದ್ದಾಳೆ. ಮತ್ತೆ ಸಮುದ್ರ ಮಂಥನ ಆರಂಭವಾಯಿತು. ಹಾಲಾಹಲ ವಿಷ ಹರಿದು ಬಂದಿದೆ, ರುದ್ರದೇವರು ಸೇವಿಸಿದ್ದಾರೆ. ರುದ್ರದೇವರು ಸೇವಿಸುವಾಗ ಸ್ವಲ್ಪ ಕೆಳಗೆ ಬಿದ್ದ ವಿಷ ಸೇವಿಸಿದ ಹಾವು ಚೇಳುಗಳು ವಿಷ ಜಂತುಗಳಾದವು. ನಂತರ ಮದ್ಯ ಬಂದಿತು. ಅದನ್ನು ದೈತ್ಯರು ಸೇವಿಸಿದ್ದಾರೆ, ಕೊನೆಗೆ ಸಮುದ್ರದಿಂದ ಬಂದ ಅಮೃತವನ್ನು ದೇವತೆಗಳು ಸ್ವೀಕರಿಸಿದರು.
0 Comments