ಪುತ್ರ ಶೋಕದಿಂದ ವ್ಯಾಕುಲರಾದ ಪಾಂಡವರು ಮೃತ ಪುತ್ರರ ದೇಹ ಸಂಸ್ಕಾರಾದಿ ಕರ್ಮಗಳನ್ನು ಮುಗಿಸಿದರು. ಯುದ್ದದಲ್ಲಿ ಮೃತಟ್ಟಿದ್ದ ಬಂಧುಗಳಿಗೆ ತಿಲೋದಕ ಕೊಡಲು ಪಾಂಡವರು ಶ್ರೀ ಕೃಷ್ಣ, ಕುಂತಿ, ಗಾಂಧಾರಿ ಜತೆಗೂಡಿ ಗಂಗಾ ತಟಕ್ಕೆ ಬಂದರು. ತಿಲೋದಕ ಕೊಟ್ಟು ಗಂಗೆಯಲ್ಲಿ ಸ್ನಾನ ಮಾಡಿದರು. ಶೋಕ ಸಂತಪ್ತರಾದ ಧೃತರಾಷ್ಟ್ರ, ಗಾಂಧಾರಿ, ಕುಂತಿ ಮುಂತಾದವರಿಗೆ ಕೃಷ್ಣ ಸಮಾಧಾನ ಹೇಳಿದನು. ನಂತರ ಸಾತ್ಯಕಿ. ಉದ್ಧವರ ಜತೆ ಧ್ವಾರಕೆಗೆ ಹೋಗಲು ಶ್ರೀ ಕೃಷ್ಣ ನಿರ್ಧ ರಿಸಿದ. ಕೃಷ್ಣ ರಥದಲ್ಲಿ ಕುಳಿತು ಇನ್ನೆನು ಹೊರಡಬೇಕು ಎನ್ನುವಷ್ಟರಲ್ಲಿ ಉತ್ತರೆಯೂ ಅಳುತ್ತಾ ಓಡಿಬಂದಳು. ಭಗವಂತ ರಕ್ಷಿಸು ಎಂದಳು. ವೇದಿಪ್ಯಮಾನ ತೀಕ್ಷಣ ಬಾಣವು ನನ್ನಡೆಗೆ ಬರುತ್ತಿದೆ. ನನ್ನನ್ನು ಭಸ್ಮ ಮಾಡಲಿ ಅಂಜುವುದಿಲ್ಲ ಆದರೆ ಗರ್ಭದಲ್ಲಿ ಶಿಶು ಬೆಳೆಯುತ್ತಿದೆ.ಗರ್ಭ ನಾಶವಾದಂತೆ ರಕ್ಷಿಸು ಎಂದು ಕೇಷ್ಣನಲ್ಲಿ ಶರಣು ಹೋದಳು.
ಉತ್ತರೆಯ ಕರುಣೆ ಶ್ವನಿ ಕೇಳಿ ಕೃಷ್ಣನು ಈ ಅಸ್ತ್ರವು ಪಾಂಡವರನ್ನು ನಾಶ ಮಾಡಲು ಅಶ್ವತ್ಥಾಮನು ಬಿಟ್ಟಿದ್ದಾನೆ ಎಂದು ಗೊತ್ತಾಯಿತು. ಕೃಷ್ಣನು ಯೋಗ ಮಾರ್ಗದಿಂದ ಉತ್ತರೆ ಗರ್ಭ ಪ್ರವೇಶಿಸಿ ಸುದರ್ಶನ ಚಕ್ರದಿಂದ ಗರ್ಭವನ್ನು ರಕ್ಷಿಸಿದನು.
ಪಾಂಡವರು ತಮ್ಮ ಕಡೆ ಬರುತ್ತಿದ್ದ ಬೇತೆ ಬೇರೆ ಐದು ಬಾಣಗಳನ್ನು ತಡೆಯಲು ಪ್ರಹ್ಮಾಸ್ತ್ರ ತಡಗೆದುಕೊಂಡು ಅನುಸಂದಾನ ಮಾಡಲು ವಿಳಂಬವಾಗಿದ್ದನ್ನು ಕಂಡು ಕೃಷ್ಣ ಚಕ್ರದಿಂದ ಪಾಂಡವರನ್ನು ರಕ್ಷಿಸಿದನು.
ಇದಾದ ನಂತರ ಕೃಷ್ಣನು ದ್ವಾರಕೆಗೆ ಹೊರಡು ಸಿದ್ದನಾದನು. ಕುಂತಿಯು ಬಂದು ಕೃಷ್ಣನನ್ನು ಸ್ತುತಿಸಲು ಆರಂಭಿಸಿದಳು. ಕೃಷ್ಣ ನಮ್ಮನ್ನು ಎಂಥಿಂತ ಭಯಂಕರ ಆಪತ್ತಿನಿಂದ ರಕ್ಷಿಸಿದಿ. ನನ್ಮದೊಂದಿ ಪ್ರಾರ್ಥನೆ ಇದೆ ಅದನ್ನು ಮನ್ನಿಸಬೇಕು ಎಂದಳು.
ನನಗೆ ನಿರಂತರ ಕಷ್ಟವನ್ನೇ ಕೊಡು. ಏಕಂದರೆ ಕಷ್ಟಲ್ಲಿದ್ದರೆ ಸದಾ ನಿನ್ನನ್ನು ನೆನೆಯುವ ಯೋಗ ಸಿಗುತ್ತದೆ ಎಂದಳು ಕುಂತಿ.
ಯುಧಿಷ್ಠರನ್ನು ಪಟ್ಟಕ್ಕೆ ಕೂಡಿಸಿದ ಕೃಷ್ಣ ಯುಧಿಷ್ಟರನಿಂದ ಮೂರು ಅಶ್ವಮೇಧ ಯಾಗ ಮಾಡಿಸಿದನು. ಇದರಿಂದ ಧರ್ಮರಾಜನ ಕೀರ್ತಿ ಮೂರುಲೋಕ್ಕೆ ಪಸರಿಸಿತು.
ನಂತರ ಕೃಷ್ಣನು ರಥದಲ್ಲಿ ದ್ವಾರಕೆಯತ್ತ ಪ್ರಯಾಣ ಬೆಳೆಸಿದನು.
0 Comments