ಪಾಂಡವರ ತಾಯಿಯಾದ ಕುಂತೀದೇವಿಯು ತಾವು ವಾಸವಾಗಿದ್ದ ಮೇಳದ ಮನೆಯ ದಹನದ ನಂತರ ಪಾಂಡವರು ಮತ್ತು ಕುಂತಿದೇವಿಯು ಹತ್ತಿರವೇ ಇದ್ದ ಕಾಡೊಂದರ ಬಳಿ ಹೋಗುತ್ತಾರೆ. ಇನ್ನು ಈ ಕಾಡಿನಲ್ಲಿ ಇದ್ದ ಹಿಡಂಬಿ ಮತ್ತು ಆಕೆಯ ಸಹೋದರ ರ–ಕ್ಕಸರು ಈ ಪಾಂಡವರನ್ನು ಕಾಣುತ್ತಾರೆ.
ಪಾಂಡವರ ಮೇಲೆ ದಾಳಿ ಮಾಡಲು ಬಂದ ಹಿಡಂಬಿಯ ಸಹೋದರನನ್ನು ಭೀಮ ತನ್ನ ಅತಿ ಬಲದಿಂದ ಸಂಹಾರ ಮಾಡುತ್ತಾನೆ. ಆದರೆ ಆ ಸಮಯದಲ್ಲಿ ಹಿಡಂಬಿಯು ಸುಂದರವಾದ ಹೆಣ್ಣಿನ ಅವತಾರವನ್ನು ತಾಳಿ ಕುಂತೀದೇವಿಯ ಮನವೊಲಿಸಿಕೊಂಡು ಭೀಮನನ್ನು ಮದುವೆಯಾಗುತ್ತಾಳೆ ಇನ್ನೂ ಇವರಿಬ್ಬರಿಗೆ ಜನಿಸಿದ ಮಗುವೇ ಘಟೋದ್ಗಜ. ಉತ್ತ್ ಎಂದರೆ ನಿಂತಿರುವ ಘಟಾ ಅಂದರೆ ಮಡಕೆ ಮತ್ತು ಕಚ್ಚಾ ಅಂದರೆ ಕೂದಲು ಅಂದರೆ ಘಟೋದ್ಗಜನ ತಲೆಯ ಆಕಾರವು ಮಡಿಕೆಯಂತೆ ತಲೆಯ ಮೇಲಿನ ಕೂದಲು ತಂತಿಯಂತೆ ನಿಂತಿದ್ದವು ಅಂದರೆ ಘಟೋದ್ಗಜನ ದೇಹವು ಅರ್ಧ ರಾಕ್ಷಸ ಮತ್ತು ಅರ್ಧ ಮನುಷ್ಯನ ದೇಹವನ್ನು ಹೋಲುತ್ತಿತ್ತು.
ತಂದೆಯ ಅಪಾರವಾದ ಶಕ್ತಿ ಮತ್ತು ತನ್ನ ತಾಯಿಯಿಂದ ಬಂದ ರಕ್ಕಸ ಗುಣ ಘಟೋದ್ಗಜನನ್ನು ಮಹಾಪರಾಕ್ರಮಿಯಾಗಿಸಿತ್ತು ಮತ್ತು ಆತನಲ್ಲಿ ರಾಕ್ಷಸ ಗುಣವೂ ಸಹ ಇತ್ತು. ರಾಕ್ಷಸ ವಿದ್ಯೆ ತಂದೆಯಿಂದ ಬಂದ ಪರಾಕ್ರಮ ಶಕ್ತಿಯಿಂದ ಯುದ್ಧಭೂಮಿಯಲ್ಲಿ ಸೋಲಿಲ್ಲದೆ ಘಟೋದ್ಗಜ ಯುದ್ಧವನ್ನು ನಡೆಸಿದ ಮತ್ತು ಕೌರವರ ಮೇಲೆ ದಾಳಿ ಮಾಡಿ ಸಾಕಷ್ಟು ಮಹಾವೀರರ ಪ್ರಾಣವನ್ನು ಕೂಡ ತೆಗೆದುಕೊಂಡಿದ್ದ ಇನ್ನೂ ಘಟೋದ್ಗಜನ ಈ ಪೌರುಷವನ್ನು ಕಂಡ ದುರ್ಯೊಧನನು ಕರ್ಣನ ಬಳಿ ಹೋಗಿ ಕರ್ಣನನ್ನು ಮನವೊಲಿಸುತ್ತಾನೆ ಈ ಘಟೋದ್ಗಜನನ್ನು ಹೇಗಾದರೂ ಮಾಡಿ ಸಂಹರಿಸಬೇಕೆಂದು ಕರ್ಣನ ಬಳಿ ಕೇಳಿಕೊಂಡಾಗ ಕರ್ಣ ತನ್ನ ಬಳಿ ಇರುವ ಎಲ್ಲಾ ಅಸ್ತ್ರವನ್ನು ಘಟೋದ್ಗಜನ ಮೇಲೆ ಪ್ರಯೋಗಿಸುತ್ತಾನೆ. ಕೊನೆಗೆ ಕರ್ಣನ ಬಳಿ ಇದ್ದ ವಾಸವಿ ಶಕ್ತಿ ಬಾಣವನ್ನು ಘಟೋತ್ಕಚನ ಮೇಲೆ ಪ್ರಯೋಗಿಸುತ್ತಾನೆ ಇನ್ನೂ ಆ ಬಾಣದ ಪ್ರಭಾವದಿಂದಾಗಿ ಘಟೋದ್ಗಜ ನನ್ನ ಎದೆಯನ್ನು ಸೀ-ಳಿ ಘಟೋದ್ಗಜ ಭೂಮಿಯ ಮೇಲೆ ಬಿದ್ದು ಮರಣ ಹೊಂದುತ್ತಾನೆ ಇನ್ನೂ ಘಟೋದ್ಗಜನ ದೇಹದ ಕೆಳಗೆ ಹಲವು ಸೈನಿಕರು ಸಿಲುಕಿ ಸ–ತ್ತು ಹೋಗುತ್ತಾರೆ ಕೂಡ.
ಈ ಸಂಗತಿಯನ್ನು ತಿಳಿದು ಪಾಂಡವರು ಮತ್ತು ಪಾಂಡವ ಸೈನಿಕರು ದುಃಖಿತರಾಗುತ್ತಾರೆ ಆದರೆ ಯುದ್ಧಭೂಮಿಯಲ್ಲಿ ಶ್ರೀಕೃಷ್ಣನು ತನ್ನ ಕುದುರೆಯ ದಾರವನ್ನು ಪಕ್ಕದಲ್ಲಿ ಇರಿಸಿ ಸಂಭ್ರಮ ಪಡುತ್ತಾನೆ ಇದನ್ನು ಕಂಡ ಅರ್ಜುನನು ಶ್ರೀಕೃಷ್ಣರಿಗೆ ಕೇಳಿದಾಗ ಅವರು ಘಟೋದ್ಗಜನ ಹಿಂದಿನ ಸಾ–ವಿನ ಬಗ್ಗೆ ಮತ್ತು ತನ್ನ ಖುಷಿಯ ಬಗ್ಗೆ ಅರ್ಜುನನಿಗೆ ವಿವರಿಸಿ ಹೇಳುತ್ತಾರೆ.
ಒಮ್ಮೆ ಇಂದ್ರದೇವನು ಕರ್ಣನ ಬಳಿ ಹೋಗಿ ಆತನ ಕವಚವನ್ನು ದಾನವಾಗಿ ಕೇಳಿದಾಗ ಕರ್ಣನು ಕವಚವನ್ನು ದಾನವಾಗಿ ನೀಡಿದ್ದರು ಇದಕ್ಕಾಗಿ ಇಂದ್ರದೇವನು ಕರ್ಣನಿಗೆ ಮಹಾನ್ ಶಕ್ತಿಶಾಲಿಯಾದ ವಾಸವಿ ಬಾಣವನ್ನು ವರವಾಗಿ ನೀಡಿದ್ದರು ಇನ್ನು ಕರ್ಣನು ಯುದ್ಧದಲ್ಲಿ ಆ ವಾಸವಿ ಬಾಣವನು ನಿನ್ನ ಮೇಲೆ ಪ್ರಯೋಗಿಸುವ ಯೋಚನೆಯಲ್ಲಿದ್ದ ಇದರಿಂದ ನಿನ್ನ ಪ್ರಾಣ ಹೋಗುತ್ತಿತ್ತು ಇದನ್ನು ಆ ಪ್ರಕೃತಿಯೂ ಸಹ ತಡೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ .
ಆದರೆ ಇದೀಗ ಆ ಬಾಣದ ಪ್ರಯೋಗ ಘಟೋತ್ಕಚನ ಮೇಲೆ ಆಯಿತು. ಅಷ್ಟೇ ಅಲ್ಲ ಘಟೋದ್ಗಜಾ ಒಬ್ಬ ರಾಕ್ಷಸನ ಗುಣಮುಖನಾಗಿದ್ದ ಆತ ಇನ್ನೂ ಬದುಕುಳಿದಿದ್ದರೆ ಸಾಕಷ್ಟು ಕೆಟ್ಟ ಕೃತ್ಯಗಳನ್ನು ಸಹ ಕೈಗೊಳ್ಳುತ್ತಿದ್ದ ಅವನನ್ನು ತಡೆಯಲು ಅಥವಾ ಅವನ ಸಂ–ಹಾರ ಮಾಡಲು ನಾನು ಹಲವು ಕಷ್ಟಪಡಬೇಕಾಗುತ್ತಿತ್ತು ಆದರೆ ಇದೀಗ ಒಂದೇ ಬಾಣದಲ್ಲಿ 2ಹಕ್ಕಿ ಹೊಡೆದಂತಾಯಿತು ನಿನ್ನ ಪ್ರಾಣ ಉಳಿಯಿತು ಈ ಕಾರಣದಿಂದಾಗಿಯೇ ತಾನು ಸಂಭ್ರಮಿಸುತ್ತಿದ್ದೇನೆ ಎಂದು ಶ್ರೀ ಕೃಷ್ಣರು ಅರ್ಜುನರಿಗೆ ಹೇಳುತ್ತಾರೆ.
0 Comments