ಪ್ರದೋಷ ಎಂದರೆ _ ಪಾಪಗಳಿಂದ ಮುಕ್ತಿ ಎಂದರ್ಥ.
ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಸಂಜೆ ನಾಲ್ಕು ಮೂವತ್ತರಿಂದ ಆರೂವರೆಯವರೆಗೆ ಈ ಕಾಲ ಇರುತ್ತದೆ. ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಬರುವ ದಾರಿಯಲ್ಲಿ ನಂದಿಯ ಮೇಲೆ “ಆನಂದ ತಾಂಡವ” (ಸಂತೋಷಕ್ಕಾಗಿ ನೃತ್ಯ ಮಾಡುವ ವಿಧಾನ. ರುದ್ರ ತಾಂಡವ ಎಂದರೆ ಪ್ರಪಂಚದ ಪ್ರಳಯಕ್ಕಾಗಿ ಮಾಡುವ ವಿಧಾನ) ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಮೂರ್ಛೆ ತಪ್ಪುತ್ತಾನೆ. ಅದು ಶ್ರಾವಣ ಮಾಸದ ಶನಿವಾರದ ದಿನವಾಗಿರುತ್ತದೆ. ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭೀಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು.
ಇಂದು ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳ್ಳೆಯದು.
ಇಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.
ಸೋಮವಾರ ಬರುವ ಪ್ರದೋಷ ಸೋಮ ಪ್ರದೋಷ ಎಂದು ಹೆಸರಾಗಿದೆ. ಶನಿವಾರ ಬರುವ ಪ್ರದೋಷವನ್ನು ಶನಿ ಪ್ರದೋಷ ಎಂದು ಕರೆಯುತ್ತಾರೆ.
ಈ ಮೊದಲೇ ತಿಳಿಸಿದಂತೆ, ಈಶ್ವರ ಹಾಲಾಹಲ ಕುಡಿದದ್ದು, ಶನಿವಾರವಾದ್ದರಿಂದ “ಶನಿ ಪ್ರದೋಷ” ತುಂಬಾ ಒಳ್ಳೆಯದಾಗಿರುತ್ತದೆ.
ಒಂದು ಶನಿ ಪ್ರದೋಷ ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.
ಶನಿವಾರ ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ. ಸಾಡೆ ಸಾತಿಯ ಪ್ರಭಾವ ಸಹ ಕಡಿಮೆಯಾಗಬಹುದು/ಹೊರಟು ಹೋಗಬಹುದು. ಈ ದಿನ ಈಶ್ವರ ಮತ್ತು ಶನಿ ಇಬ್ಬರೂ ಈ ಪೂಜೆ ಮಾಡುವವರನ್ನು ಆಶೀರ್ವದಿಸುತ್ತಾರೆ.
ಮಾಡಬಹುದಾದ ಪೂಜೆಗಳು
– ಅರ್ಚನೆ, ಶಿವ ಅಷ್ಟೋತ್ತರದ ಸಮೇತ
– ಹಾಲಿನ ಅಭಿಷೇಕ
– ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ
– ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ
ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು
ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ
ಪಂಚಾಮೃತ – ಸಂಪತ್ತನ್ನು ನೀಡುತ್ತದೆ
ತುಪ್ಪ – ಮೋಕ್ಷವನ್ನು ನೀಡುತ್ತದೆ
ಹಾಲು – ದೀರ್ಘಾಯುಷ್ಯ
ಮೊಸರು – ಮಕ್ಕಳ ಭಾಗ್ಯ
ಜೇನು ತುಪ್ಪ – ಉತ್ತಮ ಧ್ವನಿ
ಅಕ್ಕಿ ಪುಡಿ – ಸಾಲಗಳಿಂದ ಮುಕ್ತಿ
ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ
ನಿಂಬೆ ರಸ – ಸಾವಿನ ಭಯದಿಂದ ದೂರ ಮಾಡುತ್ತದೆ
ಎಳೆನೀರು – ಸಂತೋಷ ಮತ್ತು ಜೀವನ ಆನಂದ
ಬೇಯಿಸಿದ ಅನ್ನ – ಜೀವನವನ್ನು ಅದ್ಭುತ ಗೊಳಿಸುತ್ತದೆ.
ಗಂಧ (ಗಂಧದ ಪೇಸ್ಟ್) – ಲಕ್ಷ್ಮಿ ಕಟಾಕ್ಷ
ಸಕ್ಕರೆ – ಶತ್ರು ನಾಶ
ಪ್ರದೋಷವು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ನೀಡುವ ಒಂದು ಆಚರಣೆ. ದಯವಿಟ್ಟು ಇದನ್ನು ಆಚರಿಸಿ.
ಪ್ರದೋಷಸಮಯದಲ್ಲಿ ಶ್ರೀರಾವಣಕವಿವಿರಚಿತ "ಶಿವತಾಂಡವಸ್ತೋತ್ರಂ" ನ ಪಾರಾಯಣವು ತುಂಬಾ ವಿಹಿತವಾಗಿದೆ. ಈ ಸ್ತೋತ್ರದ ಕೊನೆಯಲ್ಲಿ ಫಲಶ್ರುತಿಶ್ಲೋಕವಾದ...
ಪೂಜಾವಸಾನಸಮಯೇ ದಶವಕ್ತ್ರಗೀತಿಂ |
ಯಶ್ಶಂಭುಪೂಜನಪರಃ ಪಠತಿ ಪ್ರದೋಷೇ ||
ತಸ್ಯ ಪ್ರಧಾನರಥಗಜೇಂದ್ರತುರಂಗಯುಕ್ತಾಂ |
ಲಕ್ಷ್ಮೀಂ ಸದೈವ ಸುಮುಖೀಂ ಪ್ರದದಾತಿ ಶಂಭುಃ ||
ಎಂಬ ಶ್ಲೋಕದಲ್ಲಿ ತಿಳಿಸಿದಂತೇ ಪ್ರದೋಷಕಾಲದ ಪೂಜಾಸಮಯದಲ್ಲಿ ಯಾರು ದಶವಕ್ತ್ರನಾದ ರಾವಣಕವಿಯ ಈ ತಾಂಡವಸ್ತೋತ್ರವನ್ನು ಪಠಿಸುವರೋ, ಅವರಿಗೆ ಶಂಭುವಾದ ರುದ್ರದೇವರು ಸಕಲೈಶ್ವರ್ಯವನ್ನೂ ದಯಪಾಲಿಸುತ್ತಾನೆ ಎಂದು ವರ್ಣಿಸಿದ್ದಾರೆ.
***
ಶಿವ ತಾಂಡವ ಸ್ತೋತ್ರದ ಉಗಮ ಸದ್ಗುರು: ರಾವಣ ಒಬ್ಬ ತೀವ್ರವಾದ ಶಿವ ಭಕ್ತನಾಗಿದ್ದ ಮತ್ತು ಅದರ ಕುರಿತಾದ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಬ್ಬ ಭಕ್ತನು ಎಂದೂ ದೊಡ್ಡವನಾಗಬಾರದು, ಆದರೆ ಅವನೊಬ್ಬ ದೊಡ್ಡ ಭಕ್ತನಾಗಿದ್ದನು. ಒಂದು ಸಾರಿ ಅವನು ದಕ್ಷಿಣದ ತುತ್ತತುದಿಯಿಂದ ಕೈಲಾಸಕ್ಕೆ ನಡೆದು ಬಂದನು – ಆ ಸಮಯದಲ್ಲಿ ಅವನು ಅಷ್ಟು ದೂರದಿಂದ ನಡೆದು ಬಂದನೆಂದರೆ, ನೀವದನ್ನು ಊಹಿಸಿಕೊಳ್ಳಬಹುದು! ಬಂದವನೇ ಶಿವನ ಪ್ರಶಂಸೆಗಳನ್ನು ಹಾಡಲು ಪ್ರಾರಂಭಿಸಿದನು. ಅವನ ಬಳಿ ತಾಳವನ್ನು ಹಾಕಲು ಬಳಸುತ್ತಿದ್ದ ಒಂದು ಮೃದಂಗ ಇತ್ತು ...
ಶಿವ ತಾಂಡವ ಸ್ತೋತ್ರದ ಉಗಮ
ಸದ್ಗುರು: ರಾವಣ ಒಬ್ಬ ತೀವ್ರವಾದ ಶಿವ ಭಕ್ತನಾಗಿದ್ದ ಮತ್ತು ಅದರ ಕುರಿತಾದ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಬ್ಬ ಭಕ್ತನು ಎಂದೂ ದೊಡ್ಡವನಾಗಬಾರದು, ಆದರೆ ಅವನೊಬ್ಬ ದೊಡ್ಡ ಭಕ್ತನಾಗಿದ್ದನು. ಒಂದು ಸಾರಿ ಅವನು ದಕ್ಷಿಣದ ತುತ್ತತುದಿಯಿಂದ ಕೈಲಾಸಕ್ಕೆ ನಡೆದು ಬಂದನು – ಆ ಸಮಯದಲ್ಲಿ ಅವನು ಅಷ್ಟು ದೂರದಿಂದ ನಡೆದು ಬಂದನೆಂದರೆ, ನೀವದನ್ನು ಊಹಿಸಿಕೊಳ್ಳಬಹುದು! ಬಂದವನೇ ಶಿವನ ಪ್ರಶಂಸೆಗಳನ್ನು ಹಾಡಲು ಪ್ರಾರಂಭಿಸಿದನು. ಅವನ ಬಳಿ ತಾಳವನ್ನು ಹಾಕಲು ಬಳಸುತ್ತಿದ್ದ ಒಂದು ಮೃದಂಗ ಇತ್ತು ಮತ್ತು ಅವನು ಕೈಲಾಸಕ್ಕೆ ಬರುತ್ತಿದ್ದಂತೆಯೇ, ನಿಂತಲ್ಲಿಯೇ 1008 ಶ್ಲೋಕಗಳಿರುವ ಶಿವ ತಾಂಡವ ಸ್ತೋತ್ರವನ್ನು ರಚಿಸಿದನು.
ರಾವಣನ ಸಂಗೀತಕ್ಕೆ ಮನಸೋತ ಶಿವ, ಪರಮಾನಂದದಿಂದ ಅದನ್ನು ಆಲಿಸುತ್ತಲಿದ್ದ. ಇತ್ತ ರಾವಣ, ಹಾಡುತ್ತ ಹಾಡುತ್ತ ನಿಧಾನವಾಗಿ ಕೈಲಾಸದ ದಕ್ಷಿಣ ಮುಖದಿಂದ ಅದನ್ನು ಏರಲು ಪ್ರಾರಂಭಿಸಿದ. ಇನ್ನೇನು ಅವನು ಪರ್ವತದ ತುದಿಗೆ ತಲುಪಬೇಕು ಎನ್ನುವಷ್ಟರಲ್ಲಿ, ಪಾರ್ವತಿ ಅವನು ಏರಿಬರುತ್ತಿರುವುದನ್ನು ಕಂಡಳು. ಆದರೆ ಶಿವ ಮಾತ್ರ, ಇನ್ನೂ ಅವನ ಸಂಗೀತದಲ್ಲೇ ಮುಳುಗಿಹೋಗಿದ್ದ.
ಪರ್ವತದ ತುದಿಯಲ್ಲಿ ಇಬ್ಬರಿಗೆ ಮಾತ್ರ ಸ್ಥಳವಿತ್ತು! ಆದ್ದರಿಂದ ಪಾರ್ವತಿ ಶಿವನನ್ನು ಅವನ ಸಂಗೀತ ಪರವಶತೆಯಿಂದ ಹೊರತರಲು ಪ್ರಯತ್ನಿಸಿದಳು. “ಈ ಮನುಷ್ಯ ಮೇಲಕ್ಕೆ ಹತ್ತಿ ಬರುತ್ತಿದ್ದಾನೆ” ಎಂದವಳು ಹೇಳಿದಳು. ಆದರೆ ಶಿವ ಸಂಗೀತ ಮತ್ತು ಕವಿತೆಯಲ್ಲಿ ತಲ್ಲೀನನಾಗಿ ಹೋಗಿದ್ದ. ಕೊನೆಯಲ್ಲಿ ಹೇಗೋ, ಪಾರ್ವತಿ ಅವನನ್ನು ರಾವಣನ ಸಂಗೀತದ ಮೋಡಿಯಿಂದ ಹೊರತರುವಲ್ಲಿ ಯಶಸ್ವಿಯಾದಳು, ಮತ್ತು ರಾವಣ ಪರ್ವತದ ಶಿಖರವನ್ನು ತಲುಪಿದಾಗ, ಶಿವ ತನ್ನ ಪಾದವನ್ನು ಬಳಸಿ ಅವನನ್ನು ಕೆಳಕ್ಕೆ ತಳ್ಳಿದನು. ರಾವಣ ಕೈಲಾಸದ ದಕ್ಷಿಣ ಮುಖದಿಂದ ಜಾರುತ್ತಾ ಕೆಳಕ್ಕೆ ಬಿದ್ದನು. ಅವನು ಜಾರುತ್ತಿರುವಾಗ ಅವನ ಹಿಂದೆ ಅವನ ಮೃದಂಗವೂ ಸಹ ಎಳೆದುಕೊಂಡು ಬರುತ್ತಿತ್ತು ಮತ್ತದು ಪರ್ವತದ ಮೇಲಿಂದ ಕೆಳಗಿನವರೆಗೆ ಕೊರಕಲನ್ನು ಒಂದು ಕೊರಕಲನ್ನು ಸೃಷ್ಟಿಸಿತು ಎಂಬುದಾಗಿ ಹೇಳಲಾಗುತ್ತದೆ. ನೀವು ಕೈಲಾಸದ ದಕ್ಷಿಣ ಮುಖವನ್ನು ನೋಡಿದರೆ, ಅದರ ಮಧ್ಯದಿಂದ ಬೆಣೆಯಾಕಾರದ ಗುರುತೊಂದು ಕೆಳಗಿನ ತನಕ ಹೋಗಿರುವುದನ್ನು ನೀವು ಕಾಣುತ್ತೀರಿ.
ಕೈಲಾಸದ ನಾಲ್ಕು ಮುಖಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಅಥವಾ ಭೇದ ಮಾಡುವುದು ಸರಿಯಲ್ಲ, ಆದರೆ ದಕ್ಷಿಣದ ಮುಖ ನಮಗೆ ಪ್ರಿಯವಾದುದ್ದಾಗಿದೆ ಏಕೆಂದರೆ ಅಗಸ್ತ್ಯ ಮುನಿಗಳು ದಕ್ಷಿಣ ಮುಖದಲ್ಲಿ ವಿಲೀನಗೊಂಡರು ಎಂಬ ಕಾರಣಕ್ಕಾಗಿ. ನಾವು ದಕ್ಷಿಣದ ಮುಖವನ್ನು ಇಷ್ಟಪಡುವುದು ನಾವು ದಕ್ಷಿಣ ಭಾರತದವರು ಎಂಬ ಪೂರ್ವಾಗ್ರಹದಿಂದಾಗಿರಬಹುದು ಅಷ್ಟೆ ಮತ್ತು ಅದು ಪರ್ವತದ ಅತಿ ಸುಂದರವಾದ ಮುಖ ಎಂದು ನಾನು ಭಾವಿಸುತ್ತೇನೆ! ಅದು ಖಂಡಿತವಾಗಿಯೂ ಪರ್ವತದ ಅತ್ಯಂತ ಬಿಳಿಯ ಮುಖವಾಗಿದೆ ಏಕೆಂದರೆ ಅಲ್ಲಿ ತುಂಬ ಹಿಮ ಬೀಳುತ್ತದೆ.
ಅನೇಕ ವಿಧಗಳಲ್ಲಿ ಅದು ಪರ್ವತದ ಅತ್ಯಂತ ತೀಕ್ಷ್ಣವಾದ ಮುಖವಾಗಿದೆ ಆದರೆ ಕೆಲವೇ ಕೆಲವು ಜನ ಮಾತ್ರ ದಕ್ಷಿಣ ಮುಖದ ಕಡೆಗೆ ಹೋಗುತ್ತಾರೆ. ಅದರ ಪ್ರವೇಶ ದುರ್ಗಮವಾಗಿದ್ದು, ಪರ್ವತದ ಇತರ ಮುಖಗಳಿಗಿಂತ ಹೆಚ್ಚು ಕಷ್ಟವಾದ ಮಾರ್ಗವನ್ನು ಅದು ಒಳಗೊಂಡಿದೆ ಹಾಗೂ ಕೆಲವು ರೀತಿಯ ಜನರು ಮಾತ್ರ ಅಲ್ಲಿಗೆ ಹೋಗುತ್ತಾರೆ.
ಶಿವ ತಾಂಡವ ಸ್ತೋತ್ರ – ಕನ್ನಡ
ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್
ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ-
-ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ
ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೇ
ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೇತು ವಸ್ತುನಿ
ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಳಿಧೋರಣೀ ವಿಧೂಸರಾಂಘ್ರಿಪೀಠಭೂಃ
ಭುಜಂಗರಾಜಮಾಲಯಾ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ
ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ-
-ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೇಶಿರೋಜಟಾಲಮಸ್ತು ನಃ
ಕರಾಲಫಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ-
ದ್ಧನಂಜಯಾಧರೀಕೃತಪ್ರಚಂಡಪಂಚಸಾಯಕೇ
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ-
-ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೇ ಮತಿರ್ಮಮ
ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್-
ಕುಹೂನಿಶೀಥಿನೀತಮಃ ಪ್ರಬಂಧಬಂಧುಕಂಧರಃ
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಳಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃ
ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ-
-ವಿಲಂಬಿಕಂಠಕಂದಲೀರುಚಿಪ್ರಬದ್ಧಕಂಧರಮ್
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಚ್ಛಿದಂ ತಮಂತಕಚ್ಛಿದಂ ಭಜೇ
ಅಗರ್ವಸರ್ವಮಂಗಳಾಕಳಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್
ಸ್ಮರಾಂತಕಂ ಪುರಾಂತಕಂ ಭವಾಂತಕಂ ಮಖಾಂತಕಂ
ಗಜಾಂತಕಾಂಧಕಾಂತಕಂ ತಮಂತಕಾಂತಕಂ ಭಜೇ
ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ-
-ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಫಾಲಹವ್ಯವಾಟ್ |
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಳ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ
ದೃಷದ್ವಿಚಿತ್ರತಲ್ಪಯೋರ್ಭುಜಂಗಮೌಕ್ತಿಕಸ್ರಜೋರ್-
-ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ
ತೃಷ್ಣಾರವಿಂದಚಕ್ಷುಷೋಃ ಪ್ರಜಾಮಹೀಮಹೇಂದ್ರಯೋಃ
ಸಮಂ ಪ್ರವರ್ತಯನ್ಮನಃ ಕದಾ ಸದಾಶಿವಂ ಭಜೇ
ಕದಾ ನಿಲಿಂಪನಿರ್ಝರೀನಿಕುಂಜಕೋಟರೇ ವಸನ್
ವಿಮುಕ್ತದುರ್ಮತಿಃ ಸದಾ ಶಿರಃಸ್ಥಮಂಜಲಿಂ ವಹನ್
ವಿಮುಕ್ತಲೋಲಲೋಚನೋ ಲಲಾಟಫಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಸದಾ ಸುಖೀ ಭವಾಮ್ಯಹಮ್
ಇಮಂ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ಸ್ಮರನ್ಬ್ರುವನ್ನರೋ ವಿಶುದ್ಧಿಮೇತಿಸಂತತಮ್
ಹರೇ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್
ಶಿವಾರ್ಪಣಮಸ್ತು
0 Comments