ವೇನನ ದೇಹದಲ್ಲಿದ್ದ ಮತ್ತೊಬ್ಬ ಸಾತ್ವಿಕ ಜೀವವೇ ಪೃಥುರಾಜ.
ವೇನನ ದೇಹದಲ್ಲಿ ನಾಲ್ಕು ಬಗೆಯ ಜೀವರಿಗೆ ಆಶ್ರಯವಿತ್ತು. ಪಾಪವನ್ನು ಕಳೆದುಕೊಂಡ ರಾಜಸ ಜೀವಿಯೂ ಪುತ್ರನಾದ ಪೃಥುವಿನ ಗುಣಮಹಿಮೆಯಿಂದ ಸ್ವರ್ಗವನ್ನು ಸೇರಿತು. ವೇನನ ದೇಹಾಭಿಮಾನಿಯಾದ ತಾಮಸ ಜೀವಿಯು ಮಹಾ ತಪಸ್ಸಿಗೆ ಹೋದನು. ಅಚೇತ ನಗಳಾದ ಸ್ತಂಭ ಮೊದಲಾದವುಗಳಲ್ಲಿ ಜನಿಸಿದ ಭಗವಂತ ಅಂಶ ವೇನನ ಮೃತದೇಹದಲ್ಲಿ ಪೃಥುರಾಜನ ರೂಪದಲ್ಲಿ ಜನಿಸಿದ. ಪೃಥು ರಾಜನು ಶ್ರೀ ಹರಿಯ ಅಂಶ. ಪೃಥುರಾಜನ ಜತೆ ಜನಿಸಿದ ಅರ್ಚಿ ಯಲ್ಲಿ ಲಕ್ಷ್ಮಿಯ ಅಂಶ ಇತ್ತು ಹೀಗಾಗಿ ಪೃಥು ಮತ್ತು ಅರ್ಚಿಯ ಮದುವೆ ಮಾಡಿದರು.
ನಂತರ ಖುಷಿಗಳು ವೇದಮಂತ್ರಗಳಿಂದ ಪೃಥುವಿಗೆ ರಾಜ್ಯಾಭಿಷೇಕ ಮಾಡಿದರು. ಆಗ ಕುಬೇರನು ಪೃಥು ರಾಜನಿಗೆ ಚಿನ್ನದ ಸಿಂಹಾಸನ ಕೊಟ್ಟನು. ವರುಣನು ಛತ್ರ, ವಾಯು ಚಾಮರಗಳನ್ನು, ಇಂದ್ರನು ಮುಕುಟ, ಯಮನು ದಂಡವನ್ನು, ಬ್ರಹ್ಮನು ಕವಚವನ್ನು, ಸರಸ್ವತಿಯೂ ಹಾರವನ್ನು, ವಿಷ್ಣು ಚಕ್ರ ಮತ್ತು ಲಕ್ಷ್ಮಿಯೂ ಸಂಪತ್ತನ್ನು ಕೊಟ್ಟಳು. ಪರ್ವತ, ನದಿ, ಸಮುದ್ರಗಳು ಅವನಿಗೆ ಮಾರ್ಗ ವನ್ನು ಮಾಡಿಕೊಟ್ಟವು. ಋಷಿ ಮುನಿಗಳು ಆಶೀರ್ವಾದ ಮಾಡಿದರು. ವಂದಿಗಳು ಅವನ್ನು ಸ್ತುತಿಸಹತ್ತಿದವು.
ಆಗ ಪೃಥುರಾಜ ಹೇಳುತ್ತಾನೆ ಈಗ ನನ್ನನ್ನು ಸ್ತುತಿಸಬೇಡಿ, ನಾನು ಅದಕ್ಕೆ ಯೋಗ್ಯನಲ್ಲ. ಏಕಂದರೆ ನನ್ನ ಯಾವ ಗುಣಗಳೂ ಇನ್ನೂ ಪ್ರಕಟವಾಗಿಲ್ಲ. ಮುಂದಾಗುವ ಬಗ್ಗೆ ಈಗ ಹೊಗಳುವುದು ಅಪಹಾಸ್ಯಕಾರಕವು. ಉತ್ತಮ ಸ್ಲೋಕನಾದ ಭಗವಂತನು ಇರುತ್ತಿರಲು ಸಾಮಾನ್ಯನಾದ ನನ್ನನ್ನು ಸ್ತುತಿಸುವುದು ಯೋಗ್ಯವಲ್ಲ ಕಾರ್ಯ ಮಾಡಿದ ನಂತರ ನನ್ನ ಕಾರ್ಯ ಕ್ಕೆ ಸ್ತುತಿಸಿರಿ ಎಂದು ಪೃಥುರಾಜ ನಿರಹಂಕಾರವನ್ನು ವ್ಯಕ್ತಪಡಿಸಿದ.
ಯಾವ ವ್ಯಕ್ತಿ ಓಲೈಕೆಗಾಗಿ ಹೊಗಳುವುದು ಸರಿಯಲ್ಲ. ಉತ್ತಮ ಕಾರ್ಯ ಮಾಡಿದಾಗ ಗುಣಗಾನ ಮಾಡಬೇಕು ಎಂಬ ಸಂದೇಶ ಭಾಗವತ ನೀಡಿದೆ.
ಇಂದಿನ ದಿನಗಳಲ್ಲಿ ಕಾರ್ಯ ಮಾಡಿವುದೆ ಕಡಿಮೆ ಹೊಗಳಿಸಿಕೊಳ್ಳುವುದೇ ಹೆಚ್ಚು. ಅಂಥ ಜನರಿಗೆ ಪೃಥುರಾಜನು ಆದರ್ಶವಾಗಿದ್ದಾನೆ.
0 Comments