* ಒಂದು ದಿನ = 24 ಘಂಟೆ.
* ಒಂದು ಘಂಟೆ = 60 ನಿಮಿಷ.
* ಒಂದು ನಿಮಿಷ = 60 ಸೆಕುಂಡ್.
* ಒಂದು ಘಂಟೆ = 2 ವರೆ ಘಟಿ.
* ಒಂದು ನಿಮಿಷ = 2 ವರೆ ವಿಘಟಿ.
* ಒಂದು ದಿನ = 60 ಘಟಿ
* ಒಂದು ಘಟಿ = 60 ವಿಘಟಿ
* ಒಂದು ಘಟಿ = 24 ನಿಮಿಷ.
* ಒಂದು ವಿಘಟಿ =24 ಸೆಕುಂಡ್.
1 ಮುಹೂರ್ತ= 48 ನಿಮಿಷಗಳು
15 ನಿಮೇಷ (ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.) = 1 ಕಾಷ್ಠಾ
30 ಕಾಷ್ಠಾ = 1ಕಲ
30 ಕಲ = 1 ಕ್ಷಣ
12 ಕ್ಷಣ. = 1 ಮುಹೂರ್ತ (48 ನಿಮಿಷಗಳು).
30 ಮುಹೂರ್ತ = 1ದಿನ = 1 ತಿಥಿ.
15 ದಿನ = 1 ಪಕ್ಷ.
2 ಪಕ್ಷ, = 1 ಮಾಸ ( ತಿಂಗಳು)
2ಮಾಸ = 1ಋತು.
6 ಋತು = 12 ಮಾಸ = 1ಸಂವತ್ಸರ
1 ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) .
360 ಮನುಷ್ಯ ವರ್ಷ = 1 ದೇವ ವರ್ಷ.
4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ.
8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
17,28,000 ಮನುಷ್ಯ ವರ್ಷ = ಕೃತಯುಗ ಅವಧಿ.
43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ
71 ಚತುರ್ಯುಗ = 1 ಮನ್ವಂತರ
14 ಮನ್ವಂತರ = ಬ್ರಹ್ಮನ 1 ಹಗಲು
14 ಮನ್ವಂತರ = ಬ್ರಹ್ಮನ 1 ರಾತ್ರಿ.
28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ
360 ಬ್ರಹ್ಮದಿನ = 1 ಬ್ರಹ್ಮ ವರ್ಷ
100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.
100ವರ್ಷ(864 ಕೋಟಿ×360×100) ಬ್ರಹ್ಮನ ಆಯುಷ್ಯ. ಇದಕ್ಕೆ ಪರ ಕಾಲ ಅನ್ನುವರು.
ಹೀಗೆ ಈ ಬ್ರಹ್ಮದೇವರ 100 ವರ್ಷ ಆಯುಷ್ಯ ' ಪರ' ಕಾಲ *ಪರಮಾತ್ಮನಿಗೆ* ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.
ಚತುರ್ಮುಖ ಬ್ರಹ್ಮನ ಆಯಸ್ಸು ಅಥವಾ ಸತ್ಯಲೋಕದ ಆಯಸ್ಸು 100 ವರ್ಷ. ಅಂದರೆ 864 ಕೋಟಿ X 360 X 100=31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ. ಇದು ಬ್ರಹ್ಮದೇವರ ಸೃಷ್ಟಿ ಕಾಲ.
ನಂತರ ರಾತ್ರಿ ಅಂದರೆ ಮಹಾಪ್ರಳಯ. ಈ ಮಹಾಪ್ರಳಯದ ಕಾಲ 31,104 ಸಾವಿರ ಕೋಟಿ ವರ್ಷ(ರಾತ್ರಿ).
ಪ್ರಳಯಗಳಲ್ಲಿ ಮೂರು ವಿಧ.
1. ಮನ್ವಂತರ ಪ್ರಳಯ;
2. ದಿನಪ್ರಳಯ;
3.ಮಹಾಪ್ರಳಯ. [ಈ ಮೂರು ಪ್ರಳಯಗಳಲ್ಲದೆ ಇನ್ನೂ ಅನೇಕ ಚಿಕ್ಕ ಪ್ರಳಯಗಳಾಗುತ್ತವೆ. ಯುಗ ಗಳಿಗೊಮ್ಮೆ ಚತುರ್ಯುಗಗಳಿಗೆ ಒಮ್ಮೆ, ಮನ್ವಂತರ ಗಳಿಗೆ ಒಮ್ಮೆ.....
ಮನ್ವಂತರ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುವುದಿಲ್ಲ-ಆದರೆ ನಾಗರೀಕತೆ ನಾಶವಾಗುತ್ತದೆ.
ದಿನಪ್ರಳಯ ಚತುರ್ಮುಖ ಬ್ರಹ್ಮನ ರಾತ್ರಿ. ಅಂದರೆ ಪ್ರತೀ 432 ಕೋಟಿ ವರ್ಷಕ್ಕೊಮ್ಮೆ ದಿನಪ್ರಳಯ. ಈ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುತ್ತದೆ.
ನಂತರ ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಹಾಗು ಈ ಪ್ರಳಯದಲ್ಲಿ ಸತ್ಯ ಲೋಕದಿಂದ ಹಿಡಿದು ಸರ್ವ ಲೋಕಗಳೂ ಸರ್ವ ಸ್ಥಾವರ; ಜಂಗಮ ಗಳು ಜೀವ ಜಲ ಚೈತನ್ಯಗಳು ಸೂಕ್ಷ್ಮಾತಿ ಸೂಕ್ಷ್ಮ ಪರಮಾಣುವಿನ ರೂಪದಲ್ಲಿ ಭಗವಂತನಲ್ಲಿ ಲೀನವಾಗುತ್ತವೆ. ( ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ...)
ನಿಜವಾಗಿ ಕಾಲ ಆತನನ್ನು ಅಳೆಯಲು ಸಾಧ್ಯವಿಲ್ಲ. ಆತ ಕಾಲಾತೀತ. ಕಾಲದ ವಿಕಾರ ಆತನಿಗಿಲ್ಲ. ಕಾಲ ನಿಯಾಮಕ. ಕಾಲ ಪ್ರವರ್ತಕ. ಕಾಲಾಂತರ್ಯಾಮಿ. 'ಮಹಾಕಾಲ' ನಾಮಕ ಮಹಾಸ್ವಾಮಿ ಆತ.
ಬ್ರಹ್ಮನ 100 ವರ್ಷ ದಲ್ಲಿ ಎರಡು ಅರ್ಧ. ಮೊದಲು ಐವತ್ತು ಪ್ರಥಮ, ನಂತರದ ಐವತ್ತು ದ್ವಿತೀಯ ಪರಾರ್ಧ. ಈಗ ನಾವಿರುವದು ದ್ವಿತೀಯ ಪರಾರ್ಧ .ಬ್ರಹ್ಮನ 51ನೇ ವರ್ಷದ ಪ್ರಥಮ ಹಗಲು. ಇದೇ ಶ್ವೇತವರಾಹಕಲ್ಪ.
ಒಂದು ಹಗಲಿನ 12ಗಂಟೆಗಳಲ್ಲಿ 14 ಮನ್ವಂತರಗಳು.
ಅಂದರೆ ಈಗ ಆರು ಮುಗಿದು ಏಳನೆಯದು ವೈವಸ್ವತ ಮನ್ವಂತರ .ಬೆಳಗ್ಗಿನಿಂದ 5ಗಂಟೆ 28 ನಿಮಿಷ 45ಸೆಕೆಂಡು ಮುಗಿದಿವೆ. ಸುಮಾರು ಅಲ್ಲಿ ಈಗ ಬೆಳಗಿನ 11 ಗಂಟೆ 28 ನಿಮಿಷ 48 ಸೆಕೆಂಡು.
ಹೀಗೆ ಮುಂದುವರಿಯುತ್ತದೆ ನಮ್ಮ ಸನಾತನ ಕಾಲಜ್ಞಾನ
ಮುಂದಿನ 49ನೇ ಸೆಕೆಂಡಿಗೆ ಈ ದೇಹದಿಂದ ನಾವು ಇರುವುದಿಲ್ಲ ಇದು ನಿಶ್ಚಿತ. ಯಾಕೆಂದರೆ ಬ್ರಹ್ಮನ ಒಂದು ಸೆಕೆಂಡಿಗೆ ನಮ್ಮ ಒಂದು ಲಕ್ಷ ವರ್ಷ. ೧೦೦ವರ್ಷ ನಮ್ಮ ಆಯುಷ್ಯ ಎಂದರೆ ಬ್ರಹ್ಮನ ಒಂದು ಸೆಕೆಂಡು ಕಳೆಯುವುದರೊಳಗೆ ನಾವು ಸಾವಿರಗಳಲ್ಲಿ ಹುಟ್ಟಿ ಸಾಯಬೇಕು.
ಅಂದಮೇಲೆ, ಎಲ್ಲಿಯ ಬ್ರಹ್ಮದೇವರು, ,ಎಲ್ಲಿಯ ಹುಲುಮನುಜರು ನಾವು! ನಮ್ಮೆದುರಿಗೇನೇ ಹುಟ್ಟಿ ಸಾಯುವ ದೀಪದ ಹುಳುಗಳಿದ್ದಂತೆ ನಾವು. ಕ್ಷಣಕಾಲ ಜೀವಿಸುವ ಕ್ರಿಮಿಗಳಿದ್ದಂತೆ ನಾವು ಬ್ರಹ್ಮನೆದುರು!
ಇನ್ನು ಪರಮಾತ್ಮನಿಗೆ
ಆತ ರೆಪ್ಪೆ ಬಡಿಯುವದರೊಳಗೆ, ಇಂಥ ಬ್ರಹ್ಮ ಬಂದು ಹೋಗುತ್ತಾನೆ.ಆತನ ಆಯುಷ್ಯ ಮುಗಿದಿರುತ್ತದೆ. ಪರ ಕಾಲ ಆತನೆದುರು ಶೂನ್ಯ. ಇಂಥ ಅನಂತ ಬ್ರಹ್ಮರು ಅವನ ಒಳಗಿದ್ದಾರೆ.ಇನ್ನು ಅನಂತ ಬ್ರಹ್ಮರು ಬರಲಿದ್ದಾರೆ.
ಅಂದಮೇಲೆ ಯಾವ ಲೆಕ್ಕ ಪರಮಾತ್ಮನಿಗೆ ನಾವು!!!!
ಅದಕ್ಕೆ ದಾಸರನ್ನುತ್ತಾರೆ-
ಯಾತರವನಯ್ಯಾ ನಾನು ಇಂದಿರೇಶ,
ಮತ್ತೆ ನಂದೇನಿದೆಯೋ ಸ್ವಾಮಿ, ಏಲ್ಲವೂ ನಿಂದೆ.
ನೋಡಿ,ಇಷ್ಟಾದರೂ ಪರಮರಲ್ಲಿ ಪರಮನಾದ ಪರಮಾತ್ಮ, ಕ್ಷಣಕಾಲ ಜೀವಿಸುವ ನಮ್ಮನ್ನು ಕಡೆಗಾಣಿಸು
ವುದಿಲ್ಲ. ನಮ್ಮ ಮೇಲೆ ಅಪಾರ ದಯೆಮಾಡಿ ನಮ್ಮನ್ನು ಎತ್ತಿ ಹಿಡಿಯುತ್ತಾನೆ. ಉದ್ಧರಿಸುತ್ತಾನೆ.ಕರುಣೆಯ ಪಾರವಿಲ್ಲದ ಸಾಗರನಲ್ಲವೇ ಆತ!
0 Comments