Header Ads Widget

ॐ GSB Madhva Bhramins ॐ

ಮಹಾಭಾರತದೊಳಗೆ ರಾಮಾಯಣ

 


ಮಹಾಭಾರತದೊಳಗೆ ರಾಮಾಯಣ

ಆಭಿಚಾರಿಕ ಪ್ರಯೋಗಾಗ್ನಿಯಿಂದ ಹುಟ್ಟಿ ಬಂದ ರಥವನ್ನೇರಿ ಇಂದ್ರಜಿತುವು ಯುದ್ಧರಂಗಕ್ಕೆ ಆಗಮಿಸಿದನು, ಆಕಾಶಮಾರ್ಗದಲ್ಲಿ ನಿಂತುಕೊಂಡು ,ಅದೃಶ್ಯನಾಗಿದ್ದುಕೊಂಡೇ ಶಿವ ವರದಿಂದ ಎಲ್ಲರನ್ನೂ ನಾಗ ಪಾಶದಿಂದ ಕಟ್ಟಿ ಹಾಕಿದನು. ಎಲ್ಲರೂ ನಾಗ ಪಾಶದಿಂದ ಬಂಧಿತರಾಗಿ ಮೂರ್ಛೆಹೋದರು.ಆಗ ಗರುಡನು ಅಲ್ಲಿಗೆ ಆಗಮಿಸಿದನು.ಹಿಂದೆ ಮಹಾವಿಷ್ಣುವು ದೇವತೆಗಳಿಗೆ ಭೂಲೋಕದಲ್ಲಿ ಅವತರಿಸಲು ಆದೇಶಿಸಿದಾಗ ಪಕ್ಷಿರಾಜನಾದ ಗರುಡನು ಕೇಳಿದನು. ಪ್ರಭುವೇ ನಿನ್ನ ಸೇವೆಯನ್ನು ಮಾಡಲು ನನಗೂ ಅನುವು ಮಾಡಿಕೊಡು. ಆಗ ಮಹಾವಿಷ್ಣುವು ಹೇ ಗರುಡನೇ ನೀನು ಅವತಾರವನ್ನು ಮಾಡಬೇಡ. ಆದರೆ ಲಂಕಾ ಯುದ್ಧದಲ್ಲಿ ಇಂದ್ರಜಿತುವಿನ ನಾಗಪಾಶದಿಂದ ಎಲ್ಲರೂ ಬದ್ಧರಾದಾಗ ನೀನು ಬಂದು ಸಕಲ ಕಪಿವೀರರನ್ನು ಆ ನಾಗ ಪಾಶದಿಂದ ಬಿಡಿಸಿ ಶ್ರೀರಾಮನ ಸೇವೆಯ ಪುಣ್ಯ ಭಾಜನನಾಗು ಎಂದು. ಆ ಅವಕಾಶವು ಇಂದು ಒದಗಲಾಗಿ ಗರುಡನು ಅಲ್ಲಿಗಾಗಮಿಸಿ ತನ್ನ ರೆಕ್ಕೆಯ ಗಾಳಿಗೆ ಎಲ್ಲಾ ಸರ್ಪಗಳನ್ನೂ ಹೊಡೆದೋಡಿಸಿ ಕಪಿಗಳ ವಿಮೋಚನೆಗೊಳಿಸಿದನು.  ಈ ವಿಚಾರವನ್ನು ಧೂತರ ಮೂಲಕ ತಿಳಿದ ಇಂದ್ರಜಿತುವು ಮತ್ತೊಮ್ಮೆ ಆಭಿಚಾರಿಕ ಪ್ರಯೋಗವನ್ನು ನಡೆಸಿ ಅದರ ಬಲದಿಂದ ಯುದ್ಧಕ್ಕೆ ಆಗಮಿಸಿದನು. ಎರಡನೇ ಬಾರಿ ಮತ್ತೊಮ್ಮೆ ನಾಶಪಾಶದಿಂದ ಎಲ್ಲರನ್ನೂ ಕೆಡವಿದಾಗ ಯುದ್ಧರಂಗದಲ್ಲಿ ವಿಭೀಷಣನು ಇರದೇ ಇದ್ದ ಕಾರಣ ರಾಮನ ಬಳಿಗೆ  ಧಾವಿಸಿ ಬಂದನು. ಮತ್ತು ಆತನು ಶ್ರೀ ರಾಮನ ಜೊತೆ ಸೇರಿ ಜಾಂಬವಂತನ ಬಳಿಗೆ ಆಗಮಿಸಿದನು. ಅರೆ ಪ್ರಜ್ಞೆಯಲ್ಲಿದ್ದ ಜಾಂಬವಂತನ ಮುಖಕ್ಕೆ ನೀರನ್ನು ಚಿಮುಕಿಸಿದಾಗ ಜಾಂಬವಂತನು ಎದ್ದು ಕುಳಿತನು.ಹನುಮಂತನು ಬದುಕಿದ್ದರೆ ನಾವೆಲ್ಲರೂ ಬದುಕಿದಂತೆ ಎಂಬುದಾಗಿಯೂ ಇಲ್ಲವಾದಲ್ಲಿ ಎಲ್ಲರೂ ಸತ್ತಂತೆ ಎಂದು ಜಾಂಬವಂತನು ತಿಳಿಸಿದನು. ಆಗ ಹನುಮಂತನು ನಾನು ಬದುಕಿದ್ದೇನೆ ಎಂದು ಮುಂದೆ ಬಂದನು. 


Post a Comment

0 Comments