ಅವರ ಅನುಭವದ ಮುಂದೆ ಎಲ್ಲವು ಶೂನ್ಯ. ಹಿರಿಯರು ಏನೋ ಹೇಳುತ್ತಾರೆ ಎಂದು ಮೂಗು ಮುರಿಯ ಬೇಡಿ. ಒಮ್ಮೆ ಇದನ್ನ ಓದಿ ನೋಡಿ .
🕉️1) ಸೋಮವಾರ ತಲೆಗೆಣ್ಣೆ ಹಾಕಬೇಡ
🕉️2) ಒಂಟಿ ಕಾಲಲ್ಲಿ ನಿಲ್ಲಬೇಡ
🕉️3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುದು ಬೇಡ
🕉️4) ಶುಕ್ರವಾರ ಸೊಸೆನ ತವರಿಗೆ ಕಳಿಸುದು ಬೇಡ
🕉️5) ಇಡೀ ಕುಂಬಳಕಾಯಿ ಮನೆಗೆ ತರಬೇಡ
🕉️6) ಮನೆಯಲ್ಲಿ ಉಗುರು ತೆಗಿಬೇಡ
🕉️7) ಮಧ್ಯಾಹ್ನ ತುಳಸಿ ಕೊಯ್ಯಬೇಡ
🕉️8) ಹೊತ್ತು ಮುಳುಗಿದ ಮೇಲೆ ಗುಡಿಸಬೇಡ / ತಲೆ ಬಾಚ ಬೇಡ
🕉️9) ಉಪ್ಪು ಮೊಸರು ಸಾಲ ಕೊಡುವುದು ಬೇಡ
🕉️10) ಬಿಸಿ ಅನ್ನಕ್ಕೆ ಮೊಸರು ಬೇಡ
🕉️11) ಊಟ ಮಾಡುವಾಗ ಮೇಲೆ ಏಳ್ಬೇಡ
🕉️12) ತಲೆ ಕೂದಲು ಒಲೆಗೆ ಹಾಕಬೇಡ
🕉️13) ಹೊಸಿಲನ್ನು ತುಳಿದು ದಾಟಬೇಡ
🕉️14)ಮನೆಯಿಂದ ಹೊರಡುವಾಗ ಕಸ ಗುಡಿಸುವುದು ಬೇಡ
🕉️15) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ
🕉️16) ರಾತ್ರಿ ಹೊತ್ತಲ್ಲಿ ಬಟ್ಟೆ ಒಗಿಯಬೇಡ
🕉️17) ಒಡೆದ ಬಳೆ ದರಿಸಬೇಡ
🕉️18) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ
🕉️19) ಉಗುರು ಕಚ್ಚಲು ಬೇಡ
🕉️20) ಅಣ್ಣ ತಮ್ಮ ಒಟ್ಟಿಗೆ ಚೌರ ಮಾಡಿಸಬೇಡ
🕉️21) ಒಂಟಿ ಬಾಳೆಲೆ ತರಬೇಡ
🕉️22) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ
🕉️23)ಮುಸಂಜೆ ಹೊತ್ತಲ್ಲಿ ಮಲಗಬೇಡ
🕉️24) ಕಾಲು ತೊಳಿವಾಗ ಹಿಮ್ಮಡಿ ತೊಳಿಯೋದು ಮರೀಬೇಡ
🕉️25) ಹೊಸಿಲ ಮೇಲೆ ಕೂರಬೇಡ
🕉️26) ತಿಂದ ತಕ್ಷಣ ಮಲಗಬೇಡ
🕉️27) ಹಿರಿಯರ ಮುಂದೆ ಕಾಲು ಚಾಚಿ / ಕಾಲ ಮೇಲೆ ಕಾಲು ಹಾಕಿ ಕೂರಬೇಡ
🕉️28) ಕೈ ತೊಳೆದು ನೀರನ್ನು ಒದರಬೇಡಿ
🕉️29) ರಾತ್ರಿ ಊಟದ ತಟ್ಟೆ ತೊಳೆಯದೇ ಬಿಡಬೇಡ
🕉️30) ಎಂಜಲ ಕೈಯಲ್ಲಿ ಊಟ ಬಡಿಸಬೇಡ
🕉️31) ಪಾತ್ರೆಗಳ ಮೇಲೆ ಎಂಜಲು ಕೈ ತೊಳಿಯಬೇಡ....
0 Comments