ಶ್ರೀ ಕೃಷ್ಣ ಭಾಗ 92. ನಾರದರು ಕಾಲಯವನನ್ನು ಕೃಷ್ಣನ ಮೇಲೆ ಯುದ್ಧಮಾಡಲು ಕಳಿಸುತ್ತಿದ್ದಾರೆ. ಅಂದರೆ ಕಾಲಯವನ ಸಂಹಾರದ ಸಮಯ ಬಂದಿದೆ ಎಂದು ಅರ್ಥ. ಕಾಲಿಯವನಾದರೂ ಜರಾಸಂಧನ ಜೊತೆಗೂಡಿ ಯಾದವರ ಸೈನ್ಯವನ್ನೆಲ್ಲ ಮಧುರ ನಗರದಲ್ಲಿ ಮುತ್ತಿಗೆ ಹಾಕುತ್ತಾನೆ..
ಶ್ರೀಕೃಷ್ಣ ಪರಮಾತ್ಮನು ಬಲರಾಮನೊಂದಿಗೆ ಕುಳಿತು ಸಮಾಲೋಚನೆ ಮಾಡಿ ದ್ವಾರಕಾ ಪಟ್ಟಣವನ್ನು ನಿರ್ಮಿಸಿ ಬಿಡುತ್ತಾನೆ. ಅದ್ಭುತವಾದಂತಹ ಅಷ್ಟೈಶ್ವರ್ಯ ಗಳಿಂದ ಕೂಡಿದ ಅಂತಹ ದ್ವಾರಕಾ ಪಟ್ಟಣದ ನಿರ್ಮಾಣವಾದಾಗ ಯಾದ್ ವರನ್ನೆಲ್ಲ ಅತ್ಯಂತ ಕ್ಷೇಮವಾಗಿ ದ್ವಾರಕೆಯಲ್ಲಿ ಇರಿಸುತ್ತಾನೆ.
ಶ್ರೀಕೃಷ್ಣ ಕಾಲಯನನ್ನು ಸಂಹಾರ ಮಾಡುವ ಸಲುವಾಗಿ ಮಧುರೆಯ ಅರಮನೆಯ ಬಾಗಿಲಿಂದ ಹೊರ ಬರುತ್ತಿದ್ದಾನೆ.
ಕೃಷ್ಣನನ್ನೇ ಅನುಸರಿಸಿ ಕಾಲಯವ ಏನೋಓಡಿ ಬರುತ್ತಿದ್ದಾನೆ.ಕೃಷ್ಣನಾದರೂ ಹೆಜ್ಜೆಹೆಜ್ಜೆಗೂ ದಾಪುಗಾಲು ಹಾಕುತ್ತಾ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಕಾಲಯವನನ್ನು ಓಡಿಸುತ್ತಲೇ ತಾನು ಓಡುತ್ತಿದ್ದಾನೆ.. ಕಾರಣ ಕಾಲಯವನಿಗೆಮುಕ್ತಿ.
ಈ ಕಾಲಯವನಾದರೂ ಯಾರು?ಅದೇಕೆ ಅವನಿಗೆ ಅಷ್ಟೊಂದು ಶಕ್ತಿ...
ಯಾದವರಿಗೆ ಕುಲಗುರು ವಾದಂತಹ ಸರ್ವದಾ ಬ್ರಹ್ಮಚಾರಿಯು ಆದಂತಹ ಗರ್ಗ ಮುನಿಯನ್ನು ಯಾದವರು ನಪುoಸಕ ಎಂದು ಅಪಹಾಸ್ಯ ಮಾಡಿ ನಗುತ್ತಾರೆ.ಆಗ ಗರ್ಗರು ಬಹಳ ಕುಪಿತರಾಗಿ ದಕ್ಷಿಣ ದಿಕ್ಕಿಗೆ ಹೋಗಿ ಯಾದವರನ್ನು ನಿಗ್ರಹಿಸುವ ಮಗನು ಆಗಬೇಕೆಂದು ಸಂಕಲ್ಪವನ್ನು ತೊಟ್ಟು 12ವರ್ಷಗಳ ಕಾಲ ಕಬ್ಬಿಣದ ಪುಡಿಯನ್ನು ತಿನ್ನುತ್ತಾ ಶಿವನನ್ನು ಕುರಿತು ಘೋರವಾದ ತಪಸ್ಸನ್ನು ಮಾಡುತ್ತಾ ಹಾಗೆಯೇ ವರವನ್ನು ಪಡೆಯುತ್ತಾರೆ.
ಈ ವಿಷಯವನ್ನು ತಿಳಿದಂತಹ ಪುತ್ರ ಹೀನನಾಗಿ ಇದ್ದಂತಹ ಯವನರಾಜ ಗರ್ಗರನ್ನು ಕರೆಯಿಸಿ ಗೌರವಿಸುತ್ತಾನೆ. ಅವನ ಪ್ರಾರ್ಥನೆಯಂತೆ ಅವರಿoದ ನಿಯೋಗದಿಂದ ಯವನರಾಜನ ಪತ್ನಿ ಅಕ್ಷರಾದೇವಿಯಲ್ಲಿ ಪುತ್ರನನ್ನು ಪಡೆಯುತ್ತಾರೆ. ಯವನ ರಾಜನು ಮಗನಿಗೆ ರಾಜ್ಯಾಧಿಕಾರವನ್ನುನೀಡಿ ಕಾಡಿಗೆ ಹೊರಡುತ್ತಾನೆ. ಬಳಿಕ ಅವನು ನಾರದರಿಂದ ವಿಚಾರಗಳನ್ನು ತಿಳಿದು ಯಾದವರನ್ನು ದ್ವೇಶಿಸುತ್ತ ಅವರ ಮೇಲೆ ಯುದ್ಧ ಮಾಡಲು ಹೋಗುತ್ತಾನೆ..ಅವನೇ ಈ ಕಾಲಯವ..
ಇವನನ್ನು ಸಂಹರಿಸಲು ಕೃಷ್ಣನಿಂದ ಸಾಧ್ಯವಾದರೂ ಕೂಡ,ಅದಕ್ಕಾಗಿಯೇ ಪೂರ್ವ ನಿಯೋಜಿತ ಒಂದು ಸಮಯ ಕೂಡ ಇದೇ ಸಮಯದಲ್ಲಿ ಬಂದಿರುವುದು ಕೃಷ್ಣನಿಗೆ ಅನುಕೂಲವಾಗುತ್ತದೆ.
ಕೃಷ್ಣನು ಅರಮನೆಯಿಂದ ಹೊರಬೀಳುತ್ತಲೇ ಕಾಲಯವನು ಅವನನ್ನೆ ಬೆನ್ನಟ್ಟಿ ಹೋಗುತ್ತಿದ್ದಾನೆ. ಸುಂದರನಾದ ಕೃಷ್ಣನನ್ನು ನೋಡಿದ ತಕ್ಷಣವೇ ಇವನೇ ಕೃಷ್ಣನೆಂದು ಅವನಿಗೆ ಅರ್ಥವಾಗುತ್ತದೆ. ನಾರದರು ಹೇಳಿದಂತೆ ಅವನ ಲಕ್ಷಣಗಳನ್ನಲ್ಲ ನೋಡುತ್ತಾನೆ. ಶ್ರೀಕೃಷ್ಣನು ಆಯುಧ ವಿಲ್ಲದೆ ಹೋಗುತ್ತಿರುವುದು ನೋಡಿ ತಾನೂ ಕೂಡ ನಿರಾಯುಧನಾಗಿ ಹೊರಡಲು ಅವನ ಹಿಂದೆಯೇ ಓಡುತ್ತಾನೆ.ತನಗೆ ಬೆನ್ನು ತೋರಿಸಿಕೊಂಡು ಹೋಗುತ್ತಿದ್ದ, ಯೋಗಿಗಳಿಂದಲೂ ಕೂಡ ಹಿಡಿಯಲು ಸಾಧ್ಯವಾಗದಂತಹ ಶ್ರೀಕೃಷ್ಣನನ್ನು ಹಿಡಿಯುವ ಉದ್ದೇಶದಿಂದ ಕಾಲಯವನನನ್ನು ಬೆನ್ನಟ್ಟುತ್ತಾನೆ..
ಶ್ರೀಕೃಷ್ಣ ಪರಮಾತ್ಮ ನಾದರೂ ಅವನಿಗೆ ಸಿಗುವುದಿಲ್ಲ. ಕೃಷ್ಣನಿಗೆ ಕೂಗಿ,ಶ್ರೇಷ್ಠವಾದಕುಲದಲ್ಲಿ ಹುಟ್ಟಿರುವ ನಿನಗೆ ಯುದ್ಧದಿಂದ ಪಲಾಯನ ಮಾಡುವುದು ಒಳ್ಳೆಯದು ಎನಿಸುವುದಿಲ್ಲ ಎಂದು ಕೂಗುತ್ತಲೇ ಅವನನ್ನು ಹಿಡಿಯಲು ಓಡುತ್ತಿರುತ್ತಾನೆ.
ಕಾಲಯವನಿಗೆ ಪಾಪ ಶೇಷವು ಇನ್ನು ಇದ್ದಿದ್ದರಿಂದ ಭಗವಂತ ಅವನ ಕೈಗೆ ಸಿಕ್ಕಲಿಲ್ಲ.ಬೆನ್ನಟ್ಟಿ ಹೋಗುತ್ತಿದ್ದಂತೆ ಕಾಲಾಯವನ ನ್ನು ಕರೆದುಕೊಂಡೇ ಪರ್ವತದ ಗುಹೆಯೊಂದರಲ್ಲಿ ಹೋಗಿ ಸೇರುತ್ತಾನೆ. ಗುಹೆಯೊಳಗೆ ಹೋದಂತಹ ಶ್ರೀಕೃಷ್ಣನನ್ನೇ ಹಿಂಬಾಲಿಸಿ ಬರುತ್ತಿದ್ದ ಕಾಲಯವನ ಕೂಡ ಗುಹೆಯನ್ನು ಪ್ರವೇಶಿಸುತ್ತಾನೆ.
ಗುಹೆಯೊಳಗೆ ಹೋದ ಕೃಷ್ಣನನ್ನು ನೋಡುತ್ತಾನೆ. ಆದರೆ ಕಾಲಯವನಿಗೆ ಅವನು ಕಾಣಿಸುತ್ತಿಲ್ಲ.ಆದರೆ ಇನ್ನೊಬ್ಬನು ಅಲ್ಲಿ ಮಲಗಿದ್ದಾನೆ.ಅಲ್ಲಿ ಮಲಗಿರುವವನು ಕೃಷ್ಣನೆ ಎಂದು ಭಾವಿಸಿ ನನ್ನನ್ನು ಇಷ್ಟು ದೂರ ಕರೆತಂದು ಈಗ ಏನು ಅರಿಯದವನಂತೆ ಮಲಗಿರುವೆಯ ಮಾಯಾವಿ ಎಂದು ಕಾಲಿನಿಂದ ಒದೆಯುತ್ತಾನೆ.
ಹಲವಾರು ವರ್ಷಗಳಿಂದ ಅಲ್ಲಿಯೇ ಮಲಗಿದ್ದ ಒಬ್ಬ ಪುರುಷನು ಆ ಕಾಲಯವನನಿಂದ ಎಚ್ಚರ ದಿಂದ ಮೇಲೆಡ್ದು ಆ ಪುರುಷನು ಕಣ್ಣುಗಳನ್ನು ನಿಧಾನವಾಗಿ ಬಿಡುತ್ತಾ ಎಲ್ಲ ದಿಕ್ಕುಗಳನ್ನು ನೋಡುತ್ತಾ,ಒಮ್ಮೆ ಕಾಲಿಯವನನ್ನು ನೋಡುತ್ತಾನೆ.ಅತ್ಯಂತ ಕೋಪದಿಂದ ದೃಷ್ಟಿಸಿದ ದೃಷ್ಟಿ,ಕಾಲಯವನ ಮೇಲೆ ಬಿದ್ದೊಡನೆ ಕಾ ಲಿಯವನ ದೇಹದಿಂದ ಅಗ್ನಿಯ ಉತ್ಪತ್ತಿಯಾಗಿಅದೇ ಅಗ್ನಿ ಕ್ಷಣಮಾತ್ರದಲ್ಲಿಅವನ ದಹಿಸಲ್ಪಟ್ಟು ಭಸ್ಮವಾಗಿ ಹೋಗುತ್ತಾನೆ.
ಯಾರ ದೃಷ್ಟಿಯಿಂದ ಕಾಲಯವನು ಸುಟ್ಟು ಹೋದನೋ, ಅಂತಹ ಮಹಾಪುರುಷನೇ #ಮುಚುಕುಂದ.. ಮುಚಕುಂದನಾದರೂ ಯಾರೆಂದು ಮುಂದಿನ ಭಾಗದಲ್ಲಿ ವಿವರಿಸುತ್ತೇನೆ. ಯಾಕಾಗಿ ಅವನಿಗೆ ಅಷ್ಟೊಂದು ಶಕ್ತಿ ಇತ್ತು ಎಂದು..
0 Comments