Header Ads Widget

ॐ GSB Madhva Bhramins ॐ

ಜಗದ್ಗುರು ಗಳಾದ ಶ್ರೀ ಮಧ್ವಾಚಾರ್ಯರ ಬಗ್ಗೆ ತಿಳಿಯುವ ಪುಟ್ಟ ಪ್ರಯತ್ನ.


 ಒಡೆಯನಾಜ್ಞವ ತಾಳಿ ಕಾರ್ಯಮಾಡಿದ ಗುರುವೆ|

ಕಡು ಸಮರ್ಥ ವಿಜಯವಿಠ್ಠಲನ ನಿಜ ದಾಸ|

ಜಗದ್ಗುರು ಗಳಾದ ಶ್ರೀ ಮಧ್ವಾಚಾರ್ಯರ ಬಗ್ಗೆ ತಿಳಿಯುವ ಪುಟ್ಟ ಪ್ರಯತ್ನ.

🙏🙏

ಶ್ರೀ ಮಧ್ವಾಚಾರ್ಯರು ತಮ್ಮ ಶಿಷ್ಯ ಪರಿವಾರದ ಜೊತೆಯಲ್ಲಿ ಒಮ್ಮೆ ಬದರಿ ಯಾತ್ರೆ ಕೈಗೊಂಡರು. ಬದರಿ ಕ್ಷೇತ್ರದ ಹತ್ತಿರ ಬರುತ್ತಾ ಇದ್ದಾರೆ.

ಅಲ್ಲಿ ಒಬ್ಬ ರಾಕ್ಷಸ ಹುಲಿಯ ವೇಷದಲ್ಲಿ ಇವರನ್ನು ಸಂಹರಿಸಲು ಕಾಯುತ್ತಾ ಕುಳಿತಿದ್ದ.

ಸಜ್ಜನರ ,ಭಗವದ್ಭಕ್ತರ ವಿನಾಶ,ಸಾವು, ಬಯಸುವದು ರಾಕ್ಷಸರ ಗುರಿ ಅಥವಾ ಸ್ವಭಾವ. ಅದಕ್ಕೆ ಅವರು ಹೇಗಾದರು ವೇಷ ಬದಲಾವಣೆಗಳನ್ನು ಮಾಡಬಲ್ಲರು.ಇದಕ್ಕೆ ಪೂರಕವಾದ ಕತೆಗಳನ್ನು ರಾಮಾಯಣ ಮಹಾಭಾರತ ಮತ್ತು ಭಾಗವತಾದಿ ಮಹಾ ಪುರಾಣಗಳಲ್ಲಿ ಕೇಳಿರುತ್ತೇವೆ.

ಹುಲಿಯ ವೇಷದಲ್ಲಿ ಇದ್ದ ರಕ್ಕಸನಿಗೆ ಶ್ರೀ ಮಧ್ವಾಚಾರ್ಯರನ್ನು ನೋಡಿ ಮನದಲ್ಲಿ ಯೋಚಿಸುವನು.. ಇವರು ಅಜೇಯರು.ಇವರ ಮೇಲೆ ಯಾವ ದೈತ್ಯರ ಆಟ ಸಾಗದು.ಇವರ ಮೇಲೆ ಆಕ್ರಮಣ ಮಾಡಿದವರು ಎಲ್ಲಾ ಮೃತ್ಯು ಲೋಕದ ಕಡೆಗೆ ಪಯಣ ಬೆಳೆಸಿದ್ದಾರೆ.ಯಾರೊಬ್ಬರೂ ಹಿಂದಿರುಗಿ ಬಂದಿಲ್ಲ. ಅದಕ್ಕಿಂತ ಇವರ ಬದಲಿಗೆ ಇವರ ಶಿಷ್ಯರಾದ ಶ್ರೀ ಸತ್ಯತೀರ್ಥರನ್ನು  ಸಂಹರಿಸೋಣ ಎಂದು ನಿರ್ಧಾರ ಮಾಡಿ ತಕ್ಷಣ ಅವರ ಮೇಲೆ ಹಾರಿದ.

ದೇವರ ಪೆಟ್ಟಿಗೆ ಯನ್ನು ಹಿಡಿದು ಭಗವಂತನ ಮತ್ತು ತಮ್ಮ ಗುರುಗಳನ್ನು ಸ್ಮರಿಸುತ್ತಾ ಶ್ರೀ ಸತ್ಯತೀರ್ಥರು  ಎಲ್ಲರಿಗಿಂತ ಮುಂದೆ ಹೊರಟಿದ್ದಾರೆ.

ಯಾವುದೇ ಪ್ರಯಾಣ ಮಾಡಬೇಕು ಆದರೆ ದೇವರನ್ನು ಸ್ಮರಿಸುತ್ತಾ ಸಾಗಬೇಕು.ಹಾಗೆ ಮಾಡಿದರೆ ಸುರಕ್ಷಿತ ಪಯಣ ನಮ್ಮ ದಾಗುವದು.ಯಾವುದೇ ವಿಘ್ನಗಳು ಬರುವ ದಿಲ್ಲ.

ಹುಲಿಯ ರೂಪದಲ್ಲಿ ಇದ್ದ ರಕ್ಕಸ ಹಿಂದಿನಿಂದ ಅವರ ಮೇಲೆ ಎರಗಿದ.

ಎಲ್ಲಾ ಕಡೆ ವ್ಯಾಪ್ತರಾದ ವಾಯುದೇವರ ಕಣ್ಣು ತಪ್ಪಿಸಿ ದುಷ್ಟ ಕಾರ್ಯ ಮಾಡಲು ಸಾಧ್ಯವೇ??

ಪ್ರತಿಯೊಂದು ಅವರ ಕಣ್ಣಿಗೆ ಕಾಣುತ್ತದೆ. 

ಇನ್ನೇನು ಅವರ ಮೇಲೆ ಹುಲಿ ಬೀಳಬೇಕು!!.ತಕ್ಷಣ

ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರ ಹಸ್ತದ ಪೆಟ್ಟು ಆ ಹುಲಿಯ ತಲೆ ಮೇಲೆ ಬಿತ್ತು.

ಶ್ರೀ ಸತ್ಯತೀರ್ಥರನ್ನು ಕೊಲ್ಲಲು ಬಂದವ ಆ ತಕ್ಷಣ ಯಮಪುರಿಗೆ ಸೇರಿಬಿಟ್ಟ.

ಭೀಮಸೇನ ದೇವರ ಪ್ರಹಾರಕ್ಕೆ ಬದುಕಿ ಉಳಿದ ದುಷ್ಟ ರು ಉಂಟೇ??

ಹುಲಿ ಹಾರುವುದು ಕಂಡು ಹಿಂದೆ ಇದ್ದ ಶಿಷ್ಯ ಪರಿವಾರದಲ್ಲಿ ಗಾಭರಿ,ಭಯದ ವಾತಾವರಣ ಉಂಟಾಯಿತು.

ಆದರೆ 

ತಮ್ಮ ಕೈ ಹಿಡಿದವರನ್ನು ಎಂದಿಗು ಕೈ ಬಿಟ್ಟವರಲ್ಲ ನಮ್ಮ ವಾಯುದೇವರು. ಅವರ ಮೂರು ಅವತಾರದಲ್ಲಿ ಸಹ ಅನೇಕ ದೃಷ್ಟಾಂತ ನೋಡಬಹುದು.

ಈ ಪ್ರಸಂಗದ ಒಳ ಅರ್ಥ ಇಷ್ಟೇ. 

ಶ್ರೀ ಸತ್ಯ ತೀರ್ಥರು ಭಗವಂತನ ಭಕ್ತರು. ಸಾತ್ವಿಕರು.

ಶ್ರೀ ಮಧ್ವಾಚಾರ್ಯರ ಮತವನ್ನು ಅನುಸರಿಸಿ ನಡೆಯುವವರು.ಕೈಯಲ್ಲಿ ದೇವರ ಪೆಟ್ಟಿಗೆ. ಅಂದರೆ ಭಗವಂತನ ಆರಾಧಕರು.ಸದಾ ತಮ್ಮ ಗುರುಗಳಾದ ಶ್ರೀ ಮಧ್ವಾಚಾರ್ಯರ ವಾಣಿಯನ್ನು ಅನುಸರಿಸಿ ನಡೆಯುವವರು.

ಅಂದರೆ 

ಯಾರು ಶ್ರೀ ಮಧ್ವಾಚಾರ್ಯರ ಮಾತನ್ನು ಅನುಸರಿಸಿ ನಡೆಯುವವರು,ನಿತ್ಯ ಭಗವಂತನ ಆರಾಧಕರಿಗೆ,ಅವನ ನಂಬಿದವರಿಗೆ ಎಂತಹ ದುಷ್ಟ ಶಕ್ತಿ ಗಳು ಬರಲಿ ಅವೆಲ್ಲವೂ ಸಂಹಾರ ಮಾಡಿ ನಿಮ್ಮ ರಕ್ಷಣೆ ಮಾಡುವೆವು ಎಂಬುದನ್ನು ಶ್ರೀ ಮಧ್ವಾಚಾರ್ಯರ ಇಲ್ಲಿ ಸೂಕ್ಷ್ಮ ವಾಗಿ ತೋರಿಸಿ ಕೊಡುತ್ತಾರೆ.

ಈ ಮೇಲಿನ ಪ್ರಸಂಗದ ಸಾಲು ಸುಮಧ್ವ ವಿಜಯದಲ್ಲಿ ದಶಮ ಅಧ್ಯಾಯ ೨೩ನೇ ಸಾಲಿನಲ್ಲಿ

ಬರುತ್ತದೆ.

ಇದನ್ನು ಕಂಡ ನಮಗೆ ಅನ್ನಿಸುವದು ಶ್ರೀ ಮಧ್ವಾಚಾರ್ಯರ ಮತದಲ್ಲಿ ಮತ್ತು ಅಂತಹ ಗುರುಗಳು ಸಿಗಲು  ನಾವೆಲ್ಲರೂ ಎಷ್ಟು ಪುಣ್ಯ ಮಾಡಿದ್ದೇವೆ ಅಂತ.

🙏ಶ್ರೀ ಕೃಷ್ಣಾರ್ಪಣ ಮಸ್ತು🙏

ಚಿಣ್ಣಾವತಾರ ಶ್ರೀ ವಿಜಯವಿಠ್ಠಲಂಗೆ| ಅಚ್ಛಿನ್ನ ಭಕ್ತನಾದ ಸನ್ಯಾಸಿಗಳೊಡೆಯ||

🙏ಶ್ರೀ ಕಪಿಲಾಯನಮಃ🙏

Post a Comment

0 Comments