Header Ads Widget

ॐ GSB Madhva Bhramins ॐ

🍂 ಕೃಷ್ಣಾರ್ಪಣಮಸ್ತು 🍂

 🍂 ಕೃಷ್ಣಾರ್ಪಣಮಸ್ತು  🍂




ಕೃಷ್ಣಾರ್ಪಣಮಸ್ತು ಎಂದು ನಾವು ದೇವರಿಗೆ ಒಪ್ಪಿಸಿದರೆ ಪರಮಾತ್ಮ ನಮಗೆ ಅದನ್ನು ಅನಂತ ಪಟ್ಟು ಹೆಚ್ಚು ಮರಳಿಕೊಡುತ್ತಾನೆ. ಪ್ರತಿ ದಿನ ಸಾಕಷ್ಟು ಪುಣ್ಯಗಳಿಸುತ್ತೇವೆ. ಆದರೆ ಕೃಷ್ಣಾರ್ಪಣಮಸ್ತು ಎಂದು ಕರ್ಮಾಂತ್ಯದೊಳು ಹೇಳದೇ ಹಾಳು ಮಾಡಿಕೊಳ್ಳುತ್ತಿದ್ದೇವೆ. 

 ಎಲ್ಲರೂ ನಾವು ಗಳಿಸಿದ ಪುಣ್ಯವನ್ನು ಭಗವಂತನಿಗೆ ಸಮರ್ಪಿಸಿ ದೇವರಲ್ಲಿ ನಾವು ಗಳಿಸಿದ ಪುಣ್ಯ ಎಂಬ ಸಂಪತ್ತನ್ನು ಭದ್ರವಾಗಿಡಬೇಕು.  ಪ್ರತಿ ಕಾರ್ಯವೂ ದೇವರಿಂದಲೇ ಆಗಿದ್ದು ಎಂಬ ಭಾವನೆ ಹೊಂದಿರಬೇಕು. ನಾನು ಎಂಬುದು ನಮ್ಮ ಜೀವನ ವಿನಾಶಕ್ಕೆ ಕಾರಣವಾಗುತ್ತದೆ. ನಾನು ನನ್ನಿಂದ ದೂರಾಗದ ಹೊರತು ನಾನು ನಾನಾಗಲಾರೆ. ಪರೋಪಕಾರ, ಕಷ್ಟದಲ್ಲಿದ್ದವರ ಸಹಾಯಕ್ಕೆ ಬರುವುದು ಎಲ್ಲರೂ ಕಲಿತುಕೊಳ್ಳಬೇಕು. ಭಗವಂತನ ಪಾದಗಳಿಗೆ ಶರಣು ಹೋಗಿ ಅನನ್ಯ ಭಕ್ತಿ ಮಾಡಬೇಕು.

ದೇವರು ಕೊಟ್ಟ ವಸ್ತು ಆತನಿಗೆ ಸಮರ್ಪಿಸದೇ ಜೀವನ ಹಾಳು ಮಾಡಿಕೊಳ್ಳುತ್ತಿದ್ದೇವೆ. ಎಲ್ಲವನ್ನೂ ನೀಡುವ ಭಗವಂತನಿಗೆ ನಾವು ಕೊಡುವ ವಸ್ತುವಿನಿಂದ ಏನು ಆಗಬೇಕಾದುದಿಲ್ಲ. ಆದರೂ ಮನುಷ್ಯರಲ್ಲಿ ಅಹಂಕಾರ ಬರಬಾರದು ಎಂಬ ಕಾರಣಕ್ಕಾಗಿ ದೇವರಿಗೆ ಸಮರ್ಪಿಸಬೇಕು ಎಂಬ ನಿಯಮ ರೂಢಿಗತವಾಗಿ ಬಂದಿದೆ. ಸಕಲ ಜೀವರಾಶಿಗಳನ್ನು ಸಲುಹುವ ಭಗವಂತನಿಗೆ ನಾವು ಕೊಡುವ ನೈವೇದ್ಯ ಅಗತ್ಯವಿಲ್ಲ. ದೇವರನ್ನು ಸ್ಮರಿಸಬೇಕು ಎಂಬ ಕಾರಣಕ್ಕಾಗಿ ಎಲ್ಲವನ್ನೂ ಭಗವಂತನಿಗೆ ಅರ್ಪಿಸುವ ಭಾವ ಹೊಂದಿರಬೇಕು. ನಾರದರು 9 ಜನ ಜ್ಞಾನಿಗಳು ಹೇಳಿದ್ದನ್ನು ವಸುದೇವನಿಗೆ ಹೇಳಿದರು. ನಾವು ಮಾಡಿದ ಪುಣ್ಯವನ್ನು ಭಗವಂತನಿಗೆ ಸಮರ್ಪಿಸದಿದ್ದರೆ ವ್ಯರ್ಥವಾಗುತ್ತದೆ ಎಂದು ಕವಿ ಎಂಬ ಜ್ಞಾನಿ ಸಮರ್ಪಣಾ ಭಾವದ ಬಗ್ಗೆ ಹೇಳಿದ್ದನ್ನು ನಾರದರು ಮೊದಲು ವಿವರಿಸುತ್ತಾರೆ.

 ಹತ್ತಾರು ವರ್ಷ ಶ್ರಮವಹಿಸಿ ಗಳಿಸಿದ ಪುಣ್ಯವನ್ನು ಪರಮಾತ್ಮನಿಗೆ ಸಮರ್ಪಿಸದೆ ಹಾಳು ಮಾಡಿಕೊಳ್ಳಬಾರದು. ನಾವು ಧನಾಗಾರದಲ್ಲಿಡುವ (Bank)ಹಣವು ನಾವು ಬದುಕಿರುವವರೆಗೂ ಮಾತ್ರ ಬಳಸಿಕೊಳ್ಳಬಹುದು. ಭಗವಂತನೆಂಬ ಬ್ಯಾಂಕಿನಲ್ಲಿಡುವ "ಪುಣ್ಯ" ಎಂಬ ಸಂಪತ್ತನ್ನು ಭಗವಂತ ಜನ್ಮಾಂತರದಲ್ಲೂ ನಾವು ಕೇಳದೆ ನಮಗೆ ಕಾಲಕಾಲಕ್ಕೆ ಒದಗಿಸುತ್ತಾನೆ. ಹಿಂದಿನ ಜನ್ಮದಲ್ಲಿ ನಾವು ಗಳಿಸಿದ ಪುಣ್ಯಗೆ ತಕ್ಕಂತೆ ಈ ಜನ್ಮದಲ್ಲಿ ಮತ್ತು ಮುಂದಿನ ಜನ್ಮದಲ್ಲೂ ನಮಗೆ ಭಗವಂತ ಆರೋಗ್ಯ, ಪರಿವಾರ, ಸಂಪತ್ತಿನ ರೂಪದಲ್ಲಿ ನೀಡುತ್ತಾನೆ.

ಶ್ರೀ ಕೃಷ್ಣನೇ  ಸದಾ ಜೊತೆಯಲ್ಲಿದ್ದರೂ ವಾಸುದೇವನ  ಮಗನೆಂಬ ವ್ಯಾಮೋಹದಲ್ಲಿ ಕೃಷ್ಣನ ಮಹಿಮೆ ಅರಿತಿರಲಿಲ್ಲ. ಹೀಗಾಗಿ ನಾರದರಿಂದ ಕೃಷ್ಣನ ಮಾಹಾತ್ಮ್ಯೆಯನ್ನು ತಿಳಿದುಕೊಳ್ಳಬೇಕಾಯಿತು.

Post a Comment

0 Comments