Header Ads Widget

ॐ GSB Madhva Bhramins ॐ

ಗಜೇಂದ್ರ ಮೋಕ್ಷ



 \!/ಓಂ ನಮೋಃ ಶ್ರೀ ವಿಷ್ಣುಸಹಸ್ರನಾಮಯಾಃ ನಮಃ\!/

ಗಜೇಂದ್ರ ಮೋಕ್ಷ.
ಒಮ್ಮೆ ವಿಷ್ಣು ಭಕ್ತ ಗಜರಾಜನು ತನ್ನ ನಿತ್ಯಪೂಜೆಯ ಸಲುವಾಗಿ ಕೊಳದಲ್ಲಿದ್ದ ಕಮಲವನ್ನು ಕೊಯ್ಯಲು ಇಳಿಯುತ್ತಾನೆ.ಆಗ ಅಲ್ಲಿದ್ದ ಕ್ರೂರ ಮೊಸಳೆಯು ಆನೆಯ ಕಾಲಿಗೆ ಕಚ್ಚಿ ಎಳೆಯಲಾರಂಭಿಸುತ್ತದೆ. ಆಗ ಆನೆಯು, ' ಹೇ ಮಕರ ರಾಜನೇ, ನಾನೀಗ ಭಗವಂತನ ಪೂಜೆಗೆ ಸಾಹಿತ್ಯಗಳನ್ನು ಸಂಗ್ರಹಿಸಲು ಬಂದೆ. ನನ್ನ ಕಾಲನ್ನು ಬಿಟ್ಟುಬಿಡು.ಪೂಜಾ ಕಾರ್ಯದ ನಂತರ ನಾನೇ ಇಲ್ಲಿಗೆ ಬರುತ್ತೇನೆ.ಆಗ ನಿನಗೆ ಬೇಕಾದಂತೆ ನನ್ನನ್ನು ಎಳೆದಾಡಿ ಭಕ್ಷಿಸು. ಕೆಲ ಘಳಿಗೆ ನನ್ನ ಪೂಜಾ ಕಾರ್ಯಕ್ಕೆ ಭಂಗ ತರದಿರು' ಎಂದು ಆನೆ ಬೇಡಿಕೊಂಡಿತು.ಆದರೆ ದೂರ್ತ ಮೊಸಳೆಯು ಆನೆಯ ಮಾತಿಗೆ ಯಾವ ಕರುಣೆಯೂ ತೋರದೆ ಮತ್ತೆ ಕಡಿತವನ್ನು ಘಟ್ಟಿಗೊಳಿಸಿ ಆನೆಯನ್ನು ಎಳೆಯಲಾರಂಭಿಸಿತು.ಆನೆಗೆ ಭೂಮಿಯ ಮೇಲೆ ಎಷ್ಟು ಬಲವಿದೆಯೋ,ಹಾಗೆಯೇ ಮೊಸಳೆಗೆ ನೀರಿನಲ್ಲಿ ಅಷ್ಟೇಬಲವಿರುತ್ತದೆ. ಹಾಗಾಗಿ ನೀರಿಗಿಳಿದ ಆನೆಯ ಬಲ ಕ್ಷೀಣವಾದಾಗ ತನ್ನದೇ ಆದಂತಹ ಪರಿಭಾಷೆಯಲ್ಲಿ ಭಗವಂತನನ್ನು ಘೀಳಿಡುತ್ತ ಕರೆಯಲಾರಂಭಿಸಿತು. ಭಗವಂತನಿಗೆ ಆನೆಯ ಮೊರೆ ಕೇಳುತ್ತದೆ.ತಕ್ಷಣ ತನ್ನ ಸುದರ್ಶನದಿಂದ ಮೊಸಳೆಯನ್ನು ಘಾಸಿಗೊಳಿಸಿ, ಗಜರಾಜನಿಗೆ ಮೊಸಳೆಯಿಂದ ಮೋಕ್ಷಗೊಳಿಸುತ್ತಾನೆ. ಬಳಿಕ ಆನೆಯ ಇದಿರು ನಿಜರೂಪದಲ್ಲಿ ಪ್ರಕಟವಾಗಿ ,' ಹೇ ಗಜರಾಜ,ನಿನ್ನ ಮೊರೆ ಕೇಳಿ ನಾನು ಮೊಸಳೆಯನ್ನು ಭೇದಿಸಿ ನಿನ್ನನ್ನು ರಕ್ಷಣೆ ಮಾಡಿದೆ.ನಿರ್ಭಯದಿಂದ ಈ ವನದಲ್ಲಿ ನೀನು ಓಡಾಡಬಹುದು' ಎಂದನು.ಆಗ ಆನೆಯು ವಿಷ್ಣುವಿಗೆ ಪ್ರಣಾಮವನ್ನು ಮಾಡಿ, ' ಹೇ ಪ್ರಭೂ, ನಾನು ನಿನ್ನ ಭಕ್ತ ಎಂಬುದು ನಿನಗೆ ತಿಳಿದುದರಿಂದಲೇ ವೈಕುಂಠದಿಂದ ಧಾವಿಸಿ ಬಂದೆ.ನಿನ್ನ ಭಕ್ತರಿಗೆ ಭಯವಿರುವುದೇ? ನಾನು ನಿನ್ನ ನಿತ್ಯಪೂಜಾ ಕಾರ್ಯದಲ್ಲಿ ಇರುವುದೂ ನಿನಗೂ ತಿಳಿದ್ದರಿಂದಲೇ ನನಗೊದಗಿದ ಸಂಕಟವನ್ನು ನಿವಾರಣೆಗೊಳಿಸಿದೆ. ನಾನು ಘೀಳಿಟ್ಟದ್ದು ಮೊಸಳೆಯ ಕಡಿತದ ವೇಧನೆಯಿಂದಲೂ ಅಲ್ಲ, ಭಯದಿಂದಲೂ ಅಲ್ಲ. ನಾನು ಮಾಡುವ ಇಂದಿನ ಪೂಜೆಗೆ ವಿಳಂಬವಾಗಿ ಅಡ್ಡಿಯಾಯಿತೆಂದು ಮೊರೆ ಇಟ್ಟೆನಷ್ಟೆ. ಇದು ನಿನಗೂ ತಿಳಿದಿರುವುದರಿಂದಲೇ ನೀನು ಮೊಸಳೆಯನ್ನು ಭೇದಿಸಿದೆಯಲ್ಲವೇ? ಒಂದು ವೇಳೆ ನಿನ್ನ ಭಕ್ತನಾಗಿ ,ಭಯದಿಂದ ಇರುತ್ತಿದ್ದರೆ ನೀನು ರಕ್ಷಣೆಗೆ ಬರುತ್ತಿದ್ದಿಯೇ ಹೇಳು ಪರಮಾತ್ಮಾ? ' ಎನ್ನುತ್ತಾ, ಸೊಂಡಿಲಲ್ಲಿ ಹಿಡಿದಿದ್ದ ಕಮಲವನ್ನು ಭಗವಂತನ ಚರಣಕ್ಕೊಪ್ಪಿಸಿ,ಕೃತಾರ್ಥವಾಯಿತು ಆ ಗಜರಾಜ.
ಆಗ ವಿಷ್ಣು ದೇವರು ,' ಅಯ್ಯಾ ಗಜರಾಜ, ನೀನು ನನ್ನ ಪರಮ ಭಕ್ತಾಗ್ರಣಿ ಎಂಬುದು ನಿನ್ನ ಶ್ರದ್ಧೆಯಿಂದ ಅರ್ಥವಾಗಿದೆ.ಸಕಲವನ್ನೂ ನಾನು ತಿಳಿದವನಾದರೂ,ಕೆಲವೊಮ್ಮೆ ಲೋಕಕ್ಕೆ ತಿಳಿಸಲು ಈ ರೀತಿ ಪರೀಕ್ಷೆ ಮಾಡಬೇಕಾಗುತ್ತದೆ. ಯಾರು ನನ್ನಲ್ಲಿ ಶರಣಾರ್ಥಿಯಾಗುತ್ತಾರೋ ಅವರು ನನ್ನೊಳಗೆ ಐಕ್ಯವಾಗುತ್ತಾರೆ. ಆರ್ತ ನಾದ ಮಾಡುವವನೂ,ಅರ್ಥಾರ್ತಿಯೂ, ಜ್ಞಾನಾರ್ಥಿಯೂ ನನ್ನನ್ನೇ ಸೇರುತ್ತಾರಾದರೂ ಅವರವರ ಗುಣಕ್ಕನುಗುಣವಾಗಿ ಸ್ಥಾನಮಾನಗಳಿವೆ.ಆದರೆ ಶರಣಾರ್ಥಿ ಭಕ್ತನಿಗೆ ನನ್ನ ಹೃದಯ ಕಮಲವೇ ಪರಮ ಪದವಾಗುತ್ತದೆ. ಇದೋ, ಇನ್ನೂ ನೀನು ಅನೇಕ ವರ್ಷ ಈ ವನದಲ್ಲಿ ಜೀವನ ಮಾಡಲಿಕ್ಕಿದೆ. ಸತ್ಕಾರ್ಯದಲ್ಲಿ ನೀನು ಮಗ್ನನಾಗು.ಆಡಂಬರದ ಭಕ್ತಿಯು ಹರಿಗೆ ಪ್ರಿಯವಲ್ಲ ಎಂಬುದನ್ನು ಜಗತ್ತಿಗೆ ತೋರಿಸು.ಅಂತ್ಯಕಾಲದಲ್ಲಿ ನಿನ್ನ ಕೊನೆಯುಸಿರು ನನ್ನ ಹೃತ್ಕಮಲದೊಳು ಐಕ್ಯವಾಗುತ್ತದೆ' ಎಂದು ಅಂತರ್ಧಾನವಾದರು ಆ ಕರುಣಾಮೂರ್ತಿ ಭಗವಂತ.
ಭಕ್ತಿ ಇದ್ದರೆ ಸಾಲದು.ಶ್ರದ್ಧೆಯೂ ಬೇಕು.ಇವೆರಡೂ ಇದ್ದರೂ ಸಾಲದು ಭಗವಂತನಿಗೆ ಶರಣಾರ್ಥಿಯಾದಾಗಲೇ ವಿಷ್ಣುಪದ.
ಸಂಗ್ರಹ💚💓🙏
ಭಕ್ತಿದೀಪ💓🙏💚
ಸತ್ಸಂಗ್ 🙏💓💚
3
2 Shares
Like
Comment
Share

Post a Comment

0 Comments