||ಎನ್ನ ಬಿನ್ನಪ ಕೇಳೋ ದೇವ ಧನ್ವಂತರಿ||
🙏🙏🙇♂️🙇♂️🙇♂️
ನಮ್ಮ ದೇಹದಲ್ಲಿ ಉಸಿರಾಟಕ್ಕೆ ಉಪಯೋಗಿಸುವ ಮತ್ತು ಉಪಯೋಗಿಸಿದ ಗಾಳಿ ಭಗವಂತನ ಸೃಷ್ಟಿ ಹೊರತು ನಮ್ಮ ಸೃಷ್ಟಿ ಅಲ್ಲವೇ ಅಲ್ಲ..
ಮೂಗಿನಿಂದ ಹೊರ ಹೋದ ಉಸಿರು ಮತ್ತೆ ತಿರುಗಿ ಬರುವದು ಅಥವಾ ಬಾರದೇ ಇರುವದು ಸಹ ನಮಗೆ ತಿಳಿಯದು.ಮತ್ತು ಅದರ ಬಗ್ಗೆ ನಂಬಿಕೆ ಸಹ ಇಲ್ಲ.ಹಾಗು ಅದಕ್ಕೆ ಯಾವುದೇ ಗ್ಯಾರಂಟಿ ಅಥವಾ ವಾರಂಟಿ ಕೊಡಲಾಗದು ನಮಗೆ.
ನಮಗೆಲ್ಲ ಜೀವಿಸಲು ಉಸಿರನ್ನು ಇತ್ತವನು ಆ ಮಂಗಳೆಯ ವಲ್ಲಭನಾದ ಶ್ರೀ ಹರಿಯು.
ಇಂತಹ
ಜಗತ್ಪ್ರಭುವಾದ ಭಗವಂತನು ಉಸಿರಾಟದ ಮತ್ತು ಗಾಳಿಯ ದೇವನಾದ
ಶ್ರೀ ಮುಖ್ಯಪ್ರಾಣದೇವನಿಗೆ ಪ್ರೇರಕನಾಗಿದ್ದಾನೆ.
ಮತ್ತು
ಪ್ರಾಣನಾಯಕನಾದ ಅವನು ""ಅನಿಲ"" ಮತ್ತು 'ಮುಖ್ಯಪ್ರಾಣ 'ಶಬ್ದದಿಂದ ಕರೆಯಲ್ಪಡುವವನು ಅವನೇ ಆಗಿದ್ದಾನೆ.
ಇಂದು ಜಗತ್ತಿನಲ್ಲಿ
ಕರೋನಾ ಮಹಾಮಾರಿಯ ಅರ್ಭಟಕ್ಕೆ ಸಿಲುಕಿ ಅದರಿಂದ ಬಳಲಿ ಉಸಿರಾಟದ ತೊಂದರೆಗೆ ಒಳಗಾಗಿ ಭಾದೆ ಪಡುತ್ತಾ ಇರುವ ಜೀವಿಗಳಿಗೆ ಪ್ರಾಣಶಕ್ತಿಯಾದ ಆ ಉಸಿರಾಟದ ತೊಂದರೆ ನಿವಾರಣೆ ಆಗಲಿ.ಎಲ್ಲಾ ಜೀವಿಗಳಿಗೆ ಉಸಿರಾಟದ ಕ್ರಿಯೆ ಮತ್ತು ಪ್ರಕ್ರಿಯೆಯ ಶಕ್ತಿಯನ್ನು ಸಹಜವಾಗಿ ಆಗುವಂತೆ ಸ್ವಾಮಿ ಅನುಗ್ರಹಿಸಲಿ ಎಂದು ಅವನಲ್ಲಿ ಪ್ರಾರ್ಥಿಸೋಣ..
ಅನಿಲ ನಾಮಕನಾದ ಆ ಸ್ವಾಮಿ ಈ ಜಗತ್ತನ್ನು ಕಾಪಾಡಲಿ.
ಸಕಲ ಜೀವಿಗಳಿಗೆ ಉಸಿರು ಕೊಟ್ಟವನು ಅವನೇ....
ಮತ್ತು
ಈ ಮಹಾ ಮಾರಿಯಿಂದ ಕಾಟ ತೊಲಗಿ ಲೋಕ ದ ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ತಮ್ಮ ಸ್ನಾನ ಜಪ ತಪ ಪೂಜೆಯ ನಂತರ ಶ್ರೀ ಹರಿವಾಯು ಗುರುಗಳ ಬಳಿ ತಾವೆಲ್ಲರು ಕೇಳಿಕೊಳ್ಳಿ ಎಂದು ವಿನಂತಿ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಪ್ರಾಣನಾಯಕನಾದ ಆದಿ ಕೇಶವರಾಯ| ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು||.
🙏ಶ್ರೀ ಅನಿಲಾಯ ನಮಃ🙏
ಲೋಕಃ ಸಮಸ್ತೋ ಸುಖಿನೋ ಭವಂತು
0 Comments