Header Ads Widget

ॐ GSB Madhva Bhramins ॐ

ಭಾಗವತಸಾರ - ಭರತ ಚಕ್ರವರ್ತಿ 2

 ಭಾಗವತಸಾರ-140



ಹರಿಣ ಜನನ- ಹರಿಣ ಸಂಗ

ವೃಷಭ ನಾಮಕ ಭಗವಂತನ ಮಗನೇ ಭರತ ಚಕ್ರವರ್ತಿ. ಈ ರಾಜನಿಂದಲೆ ನಮ್ಮ ದೇಶಕ್ಕೆ ಭಾರತ ಎಂದು ಹೆಸರು ಬಂದಿತು ಎಂದು ಭಾಗವತ ನೀರೂಪಣೆ ಮಾಡಿದೆ.

ಭಗವಂತನಿಗೆ ಪ್ರಿಯವಾದ ದೇಶ ಭಾರತವಾಗಿದೆ. ಭರತರಾಜ ಅನೇಕ ವರ್ಷ ರಾಜ್ಯವನ್ನಾಳಿ ಸಾಧನೆ ಮಾಡಲು ಕಾಡಿಗೆ ಹೋದ. ಅನೇಕ ವರ್ಷ ಗಂಡಕಿ ನದಿ ತೀರದಲ್ಲಿ ತಪಸ್ಸು ಆಚರಿಸಿದ. ಹೀಗೆ ಭಗವಂತನ ಧ್ಯಾನ ಮಾಡುತ್ತ  ಕಾಲ ಕಳೆಯುತ್ತಿರುವಾಗ ಒಂದು ದಿನ ಗರ್ಭಿಣಿ ಹರಿಣ (ಜಿಂಕೆ)ಯೂ ನೀರು ಕುಡಿಯಲು ನದಿಗೆ ಬಂದಿತು. ಆ ಸಮಯದಲ್ಲಿ ಸಿಂಹವು ಜಿಂಕೆಯನ್ನು ಬೆನ್ನಟ್ಟಿ ಬಂದಿತು.  ಸಿಂಹದಿಂದ ಪಾರಾಗಬೇಕೆಂದು ಗರ್ಭಿಣಿ ಜಿಂಕೆ ನದಿ ತಾಟುವಾಗ ಪ್ರಾಣ ಬಿಟ್ಟಿತು. ಜಿಂಕೆ ಗರ್ಭ ನದಿಯಲ್ಲಿ ಬಿದ್ದಿತು. ಪ್ರಾಣಿ ಮೇಲೆ ದಯೆ ತೋರಿ ಭರತ ರಾಜ ಜಿಂಕೆ ಮರಿಯನ್ನು ಸಾಕಿ ಬೆಳೆಸಿದ. ಜಿಂಕೆಮರಿಯ ಜೀವ ಉಳಿಸಿದರೆ ಸಾಕಾಗಿತ್ತು. ಜಿಂಕೆ ಮೇಲೆ ವ್ಯಾಮೋಹ ಹೆಚ್ಚಾಗಿ ಸಾಧನೆ ಕಡೆಗಣಿಸಿದ. ಕುಳಿತರು ಜಿಂಕೆ, ನಿಂತರು ಜಿಂಕೆ, ಒಂದು ಕ್ಷಣ ಜಿಂಕೆ ಕಾಣಿಸದಿದ್ದರೆ ಮರಗುತಿದ್ದ, ನನ್ನ ಜಿಂಕೆ ಮರಿಯನ್ನು ಯಾವುದಾದರೂ ಪ್ರಾಣಿಗಳು ಕೊಂದರೆ ಹೇಗೆ ಎಂದು ಹಗಲಿರಳು ಅದರದೆ ಚಿಂತೆ ಮಾಡತೊಡಗಿದ. ಸಾಧನೆ ಮರೆತು ಚಿಂಕೆಯ ಮೇಲೆ ವ್ಯಾಮೋಹ ಹೆಚ್ಚಾಯಿತು. ಇಡೀ ತನ್ನ ಜೀವನವೇ ಜಿಂಕೆ ಮೇಲೆ ಆಧಾರ ಎಂಬಂತೆ ವರ್ತಿಸತೊಡಗಿದ. 

ಒಂದು ದಿನ ರಾತ್ರಿಯಾದರೂ ಜಿಂಜೆ ಮರಿ ಬರಲಿಲ್ಲ. ಜಿಂಕೆ ಮರಿ ಎಲ್ಲಿಗೆ ಹೋಯಿತು ಎಂದು ಚಿಂತಿಸತೊಡಗಿದ. ಕೊನೆ ಗಳಿಗೆಯಲ್ಲೂ ಜಿಂಕೆ ಜಿಂಕೆ  ಎಂದು ಪ್ರಾಣ ಬಿಟ್ಟ. ಮುಂದಿನ ಜನ್ಮದಲ್ಲಿ  

ಭರತರಾಜ ಜಿಂಕೆಯಾಗಿ ಜನಿಸಿದ. ಆದರೆ ದೀರ್ಘ ಕಾಲ ಭಗವಂತನ ಸೇವೆ ಮಾಡಿದ್ದರಿಂದ ಮೊದಲಿನ ಜನ್ಮದ ಅರಿವು ಆವನಿಗಿತ್ತು. ಗಂಡಕಿ ನದಿಯಲ್ಲಿ ಬಿದ್ದು ಪ್ರಾಣ ಬಿಟ್ಟ.

ಪ್ರಾಣಿ, ಪಕ್ಷಿ ಹಾಗೂ ಮಾನವರ ಮೇಲೂ ವ್ಯಾಮೋಹ ಇರಬೇಕು ಆದರೆ ಅತಿಯಾದ ವ್ಯಾಮೋಹ ಇರಬಾರದು. ಅತಿಯಾದ ವ್ಯಾಮೋಹ ನಮ್ಮ ಸಾಧನೆಗೆ ಅಡ್ಡಿಯಾಗುತ್ತದೆ. ಜ್ಞಾನಿಗಳಾದವರು ಯಾರ ಮೇಲೂ ಹೆಚ್ಚಿಗೆ ವ್ಯಾಮೋಹ ಪಡುವುದಿಲ್ಲ. ಅತಿ ವ್ಯಾಮೋಹ ದಿಂದಾಗಿ ಭರತರಾಜನು ಸಾಧನೆ ಮರೆತು ಜಿಂಕೆ ಜಪ ಮಾಡಿದ್ದರಿಂದ ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಜನ್ಮ ತಾಳಿದ.  ಭಗವಂತನಿಂದ ಅನುಗ್ರಹಿತನಾಗಿದ್ದಕ್ಕೆ‌

ಅವನಿಗೆ ಪೂರ್ವ ಜನ್ಮದ ಸ್ಮರಣೆ ಇತ್ತು. ಹೀಗಾಗಿ ಜಿಂಕೆ ಜನ್ಮವನ್ನು ತ್ಯಜಿಸಿದ ಎಂದು ಶುಕಚಾರ್ಯರು ಭರತರಾಜನ ಕಥೆ ಹೇಳಿದರು.

ಪರೀಕ್ಷತನು ಕೇಳುತ್ತಾನೆ. ಭರತ ರಾಜ ಜಿಂಕೆ ಜನ್ಮ ತ್ಯಜಿಸಿದ ನಂತರದ ಕಥೆ ಹೇಳಿ ಎನ್ನುತ್ತಾನೆ.

ಪರೀಕ್ಷಿತ ರಾಜನ ಪ್ರಶ್ನೆಗೆ ಶುಕಾಚಾರ್ಯರು ನೀಡಿದ ಉತ್ತರ ನಾಳೆ ತಿಳಿದು ಕೊಳ್ಳೋಣ.

ಶಾಮಸುಂದರ ಕುಲಕರ್ಣಿ, ಕಲ್ಬುಗಿ {9886465925}

Post a Comment

0 Comments