ಪ್ರತಿಯೊಬ್ಬ ಮಾಧ್ವನೂ ಇದನ್ನು ಓದಬೇಕು
ಶ್ರೀಮನ್ಮಧ್ವಾಚಾರ್ಯರು ಕೊಟ್ಟ ಮಹಾಪ್ರಸಾದ
ವೇದಗಳು ,ಪಾಂಚರಾತ್ರಾಗಮ, ವೇದವ್ಯಾಸರು ಕೊಟ್ಟ ಬ್ರಹ್ಮಸೂತ್ರಗಳು-ಪುರಾಣಗಳು-ಮಹಾಭಾರತ ಮತ್ತು ವಾಲ್ಮೀಕಿರಾಮಾಯಣ ಈ ಶಾಸ್ತ್ರ ಗ್ರಂಥಗಳೇ ಮನುಷ್ಯರಿಗೆ ಮೋಕ್ಷಕ್ಕೆ ಬೇಕಾದ ಸಾಧನೆಯ ಪಥವನ್ನು ತೋರಿಸುವ ಗ್ರಂಥಗಳು ಎಂಬುದು ಸಮಸ್ತ ಆಸ್ತಿಕ ಜನರು ನಂಬಿರುವ ಸತ್ಯ.
ಇಂತಹಾ ಗ್ರಂಥಗಳನ್ನು ಕೆಲವು ಕುಟಿಲ ಜನರು ಕಲಿಯುಗದಲ್ಲಿ ಹಲವು ಬಾರಿ ತಿದ್ದಿ, ಕೂಡಿ, ಕಳೆದು, ಅಪಾರ್ಥ ಹೇಳಿ ವೇದವ್ಯಾಸರು ಕೊಟ್ಟ ಜ್ಞಾನವನ್ನು ಕಲುಷಿತಗೊಳಿಸಿಬಿಟ್ಟರು. ವೇದಾಂತ ಸಾಮ್ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಿದ್ದರು. ಆಗ ಹರಿಯಾಜ್ಞೆಯ ಮೇರೆಗೆ ಸರ್ವಜ್ಞರಾಯರಾದ ಶ್ರೀಮದಾಚಾರ್ಯರು ಅವತಾರ ಮಾಡಿ ಬಂದರು.
ವೇದವ್ಯಾಸ ದೇವರು ಕೊಟ್ಟ ಶಾಸ್ತ್ರವನ್ನು ಯಥಾರ್ಥವಾಗಿ ತಿಳಿಯಲು ಸಾಧ್ಯವಾಗದೆ ಕತ್ತಲಲ್ಲಿ ಬಿದ್ದು ಒದ್ದಾಡುತ್ತದ್ದ ಸಜ್ಜನರಿಗೆ ಸರ್ವಮೂಲಗ್ರಂಥಗಳೆಂಬ ಸೂರ್ಯನನ್ನೇ ಕೊಟ್ಟರು.
ಈ ಗ್ರಂಥಗಳಿಲ್ಲದೇ ಹೋಗಿದ್ದರೆ ಇಂದು ನಮಗೆ ವೇದವ್ಯಾಸರ ಮಾತು ಅರ್ಥವಾಗದೆ ಕಲುಷಿತ ಜ್ಞಾನ ಪೊಂದಿ ಅಸದುಪಾಸನೆಯಿಂದ ತಾಮಸ ಸಾಧನೆ ಮಾಡುತ್ತಾ ಭವದಲ್ಲಿ ಒದ್ದಾಡಬೇಕಿತ್ತು.
ಅಂತಹಾ ದುರ್ಗತಿಯಿಂದ ನಮ್ಮನ್ನು ತಪ್ಪಿಸಿ ಸದ್ಗತಿ ತೋರಿದ ಶ್ರೀಮದಾನಂದತೀರ್ಥಭಗವತ್ಪಾದರು ನಮಗೆಲ್ಲ 'ಭಗವಂತನ ಅನುಗ್ರಹ'ವೇ ಗ್ರಂಥರೂಪ ಪಡೆದವೇನೋ ಎಂಬಂತಿರುವ ಸರ್ವಮೂಲ ಗ್ರಂಥಗಳನ್ನು ಅಕ್ಕರೆಯಿಂದ ಕೊಟ್ಟರು.
ಸರ್ವಮೂಲಗ್ರಂಥಮಾಹಾತ್ಮೆ
ಗಾಂಗಮಂಗಲತರಂಗಭಂಗದಪ್ರಾಂತಸುಶ್ರೀಹರಿವೇಶ್ಮಕೃತ್ಸಮ: ಯದ್ಗತೈಕತಮವರ್ಣಲೇಖಕ:
ಗಂಗಾತೀರದಲ್ಲಿ ವಿಷ್ಣು ದೇವಾಲಯ ಕಟ್ಟಿಸಿ ವೈಭವದಲ್ಲಿ ವಿಧಿವತ್ತಾಗಿ ನಿತ್ಯನಿರಂತರ ಪೂಜಿಸಿದರೆ ಯಾವ ಪುಣ್ಯ ಬರುವುದೋ ಅಷ್ಟೂ ಪುಣ್ಯ ಭಕ್ತಿಯಿಂದ ಅನುಸಂಧಾನ ಪೂರ್ವಕವಾಗಿ ಸರ್ವಮೂಲಗ್ರಂಥದ ಒಂದು ಅಕ್ಷರ ಬರೆದರೆ ಲಭಿಸುವುದು.ಈ ಗ್ರಂಥಗಳ.ಎತ್ತರ ಎಷ್ಟೆಂದು ಊಹೆ ಮಾಡಿಕೊಳ್ಳುವಷ್ಟು ಎತ್ತರವೂ ನಮಗಿಲ್ಲ.
ನಾವಿನ್ನೂ ಹುಟ್ಟೇ ಇಲ್ಲ
ಅಂತಹಾ ಸರ್ವಮೂಲ ಗ್ರಂಥಗಳ ಮಹಿಮೆ ನಮಗೆ ತಿಳಿದಿದ್ದೂ ಕೂಡ ನಾವು ನಮ್ಮ ಇವತ್ತಿನ ಒಂದೇ ಒಂದು ದಿನ ಅಂದರೆ ಇಂದು ಸರ್ವಮೂಲ ಗ್ರಂಥವನ್ನು ಓದದೆ ಇದ್ದೇವೆ ಎಂದರೆ ನಮ್ಮ ಜೀವನದಲ್ಲಿ ಈ ಒಂದು ದಿನ ಲೆಕ್ಕಕ್ಕೇ ಬರುವುದೇ ಇಲ್ಲ ಎಂದು ತಿಳಿಯಬೇಕು. ಈ ಒಂದು ದಿನ ಜೀವನದಲ್ಲಿ ವ್ಯರ್ಥವಾಗಿಹೋಯಿತು ಅಷ್ಟೆ.
ಆ ಲೆಕ್ಕದಲ್ಲಿ ನೋಡಿದರೆ ಎಷ್ಟೋ ಮಂದಿ ಇನ್ನೂ ಹುಟ್ಟೇ ಇಲ್ಲ . ಏಕೆಂದರೆ ಅವರು ಸರ್ವಮೂಲ ಗ್ರಂಥಗಳನ್ನು ಜೀವನದಲ್ಲಿ ಮುಟ್ಟೇ ಇಲ್ಲ.
ಹೀಗಿರುವಾಗ ಮಾಧ್ವನಾಗಿ ಸರ್ವಮೂಲ ಗ್ರಂಥವನ್ನು ಓದಿಲ್ಲ ಎಂದರೆ ಅದು ನಾಚಿಕೆಗೇಡಿನ ಸಂಗತಿ. ಆದರೆ ಈಗಲೂ ಕಾಲ ಮಿಂಚಿಲ್ಲ. ಇನ್ನು ಮುಂದೆಯಾದರೂ ಜ್ಞಾನಿಗಳ ಮಾರ್ಗದರ್ಶನ ಪಡೆದು ಸರ್ವಮೂಲ ಗ್ರಂಥಗಳ ಯಥಾಶಕ್ತಿ ಅಧ್ಯಯನ ಶುರು ಮಾಡುತ್ತೇನೆ ಎಂದು ಸಂಕಲ್ಪ ಮಾಡಲೇಬೇಕು. ದಿನಕ್ಕೆ ಕನಿಷ್ಠ ಒಂದು ಶ್ಲೋಕ ಪಾರಾಯಣ ಮಾಡದೇ ನಾನು ಮಲಗುವುದಿಲ್ಲ ಎಂಬ ಸಂಕಲ್ಪ ನಾವು ಮಾಡಬೇಕು.
ತಡವಾದರೂ ಮಾಡದೆ ಸುಮ್ಮನೆ ಇರುವುದಕ್ಕಿಂತ ಉತ್ತಮ.
ಸರ್ವಮೂಲಗ್ರಂಥಗಳಿವು. ಇವು ಸಾಮನ್ಯವಲ್ಲ
ಆಚಾರ್ಯರ ಎಲ್ಲಾ ನೇರ ಶಿಷ್ಯರು, ಜಯತೀರ್ಥರು, ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು,ರಘೂತ್ತಮರು,ಗುರುರಾಯರು, ಸತ್ಯಧ್ಯಾನರು ಮುಂತಾದ ಯತಿಕುಲಭೂಷಣರನ್ನು ವೇದಾಂತ ಸಾಮ್ರಾಜ್ಯದಲ್ಲಿ ಮೆರೆಸಿದ ಗ್ರಂಥಗಳು.
ಪುರಂದರದಾಸರು,ಕನಕದಾಸರು,ವಿಜಯದಾಸರು,ಗೋಪಾಲದಾಸರು,ಜಗನ್ನಾಥದಾಸರು,ಮಹಿಪತಿದಾಸರು ಮುಂತಾದ ದಾಸವರೇಣ್ಯರನ್ನು ಹಾಡಿ ಕುಣಿಸಿದ ಗ್ರಂಥಗಳು.
ಆ ಮಹನೀಯರಿಗೆ ಹರಿಯ ಒಲುಮೆಯನ್ನು ನೀಡಿ ಶಾಪಾನುಗ್ರಹಶಕ್ತಿಯನ್ನು ಪ್ರಸಾದಿಸಿದ ಗ್ರಂಥ.
ಹೇಳದೆ ಮಾಡುವವನು ಉತ್ತಮ. ಹೇಳಿಸಿಕೊಂಡು ಮಾಡುವವನು ಮಧ್ಯಮ.
ಹೇಳಿದರೂ ಮಾಡದವನು ಅಧಮ.
ಸಮಸ್ತ ಸಜ್ಜನ ವೈಷ್ಣವ ಬಂಧುಗಳೇ ಕೇಳಿ
ಈ ಕುರಿತು ಸಮಸ್ತ ಸಜ್ಜನರಲ್ಲಿ ಜಾಗೃತಿ ಮೂಡಿಸಲು ವಿಚಾರ-ಜ್ಞಾನದ ಮೂಲಕ #ಸರ್ವಮೂಲ_ಅಭಿಯಾನ ಪ್ರಾರಂಭ ಮಾಡಿದ್ದೇವೆ.
ಈ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಸಜ್ಜನರಲ್ಲಿ ಪ್ರಾರ್ಥನೆ.
ಫೇಸ್ಬುಕ್ ಮೂಲಕ ಈ ಅಭಿಯಾನದ ಚಟುವಟಿಕೆಗಳು ನಡೆಯಲಿದೆ.
ನಾವೇನು ಮಾಡಬೇಕು?
#SarvamoolaChallenge ಅನ್ನು ನಾವು ಸ್ವೀಕರಿಸಬೇಕು.
ಈ ಚಾಲೆಂಜ್ ಪ್ರಕಾರ ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳ ಪಟ್ಟಿಯನ್ನು ಕೈಬರಹದಲ್ಲಿ ಒಂದು ಹಾಳೆಯ ಮೇಲೆ ದುಂಡಾಗಿ ಬರೆದು , ಕೆಳಗೆ ನಿಮ್ಮ ಮತ್ತು ನಿಮ್ಮ ಊರಿನ ಹೆಸರು ಬರೆದು ಫೋಟೋ ತೆಗೆದು Facebook ನಲ್ಲಿ ಅಪ್ಲೋಡ್ ಮಾಡಿ. ಆ ಪೋಸ್ಟಿನಲ್ಲಿ ತಪ್ಪದೆ #SarvamoolaChallenge #SarvamoolaAbhiyana
ಎಂದು ಹ್ಯಾಷ್ ಟ್ಯಾಗ್ ಹಾಕಿ.
ಅನಂತರ ಅದನ್ನು ನಿಮ್ಮ ಸ್ನೇಹಿತರಿಗೆ ಟ್ಯಾಗ್ ಮಾಡಿ ಅವರಿಗೂ ಹೀಗೇ ಅಪ್ಲೋಡ್ ಮಾಡುವಂತೆ ಚಾಲೆಂಜ್ ಹಾಕಿ.
ಹೀಗೆ ಇದು ದೊಡ್ಡ ಸಂಖ್ಯೆಯಲ್ಲಿ ಆಗಲು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ.
ತ್ರೈಲೋಕ್ಯಾಚಾರ್ಯರಾದ ಶ್ರೀಮನ್ಮಧ್ವಾಚಾರ್ಯರ ಸರ್ವಮೂಲಗ್ರಂಥಗಳ ಕೀರ್ತಿ ದಶದಿಕ್ಕುಗಳಿಗೆ ಹರಡಲಿ.
ಈ ಚಾಲೆಂಜ್ ಗೆ ಯಾವುದೇ ಜಾತಿ-ಲಿಂಗ-ವಯಸ್ಸಿನ ಬೇಧವಿಲ್ಲದೆ ಸಮಸ್ತರೂ ಸೇರಬಹುದು.
ಶ್ರೀಮದಾಚಾರ್ಯರು ಅನೇಕ ಕೃತಿಗಳನ್ನು ರಚಿಸಿದ್ದಾರೆ ನಾನಾಸುಭಾಷಿತಸ್ತೋತ್ರಗಾಥಾದಿಕೃತಿಸತ್ಕೃತೀ:
ನಮಗಿಂದು ಉಪಲಬ್ಧವಾದ ಕೃತಿಗಳಿವು.
ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯಪ್ರಣೀತ ಸರ್ವಮೂಲಗ್ರಂಥಾಃ
1)ಬ್ರಹ್ಮಸೂತ್ರಭಾಷ್ಯಮ್
2)ಅನುವ್ಯಾಖ್ಯಾನಮ್
೩)ನ್ಯಾಯವಿವರಣಮ್
೪)ಅಣುಭಾಷ್ಯಮ್
೫)ಗೀತಾಭಾಷ್ಯಮ್
೬)ಗೀತಾತಾತ್ಪರ್ಯನಿರ್ಣಯ:
೭)ಮಹಾಭಾರತತಾತ್ಪರ್ಯನಿರ್ಣಯ:
೮)ಭಾಗವತತಾತ್ಪರ್ಯನಿರ್ಣಯ:
೯)ಋಗ್ಭಾಷ್ಯಮ್
೧೦)ಐತರೇಯೋಪನಿಷದ್ಭಾಷ್ಯಮ್
೧೧)ಈಶಾವಾಸ್ಯೋಪನಿಷದ್ಭಾಷ್ಯಮ್
೧೨)ಕಾಠಕೋಪನಿಷದ್ಭಾಷ್ಯಮ್
೧೩)ಬೃಹದಾರಣ್ಯಕೋಪನಿಷದ್ಭಾಷ್ಯಮ್
೧೪)ತೈತ್ತಿರೀಯೋಪನಿಷದ್ಭಾಷ್ಯಮ್
೧೫)ತಲವಕಾರೋಪನಿಷದ್ಭಾಷ್ಯಮ್
೧೬)ಛಾಂದೋಗ್ಯೋಪನಿಷದ್ಭಾಷ್ಯಮ್
೧೭)ಷಟ್ಪ್ರಷ್ನೋಪನಿಷದ್ಭಾಷ್ಯಮ್
೧೮)ಆಥರ್ವಣೋಪನಿಷದ್ಭಾಷ್ಯಮ್
೧೯)ಮಾಂಡೂಕೋಪನಿಷದ್ಭಾಷ್ಯಮ್
೨೦)ವಿಷ್ಣುತತ್ವವಿನಿರ್ಣಯ:
೨೧)ಕರ್ಮನಿರ್ಣಯಃ
೨೨)ತತ್ವೋದ್ಯೋತಃ
೨೩)ಉಪಾಧಿಖಂಡನಮ್
೨೪)ಪ್ರಪಂಚಮಿಥ್ಯಾತ್ವಾನುಮಾನಖಂಡನಮ್
೨೫)ಮಾಯಾವಾದಖಂಡನಮ್
೨೬)ತತ್ತ್ವಸಂಖ್ಯಾನಮ್
೨೭)ತತ್ವವಿವೇಕಃ
೨೮)ಪ್ರಮಾಣಲಕ್ಷಣಮ್
೨೯)ಕಥಾಲಕ್ಷಣಮ್
೩೦)ತಂತ್ರಸಾರಸಂಗ್ರಹಃ
೩೧)ಕೃಷ್ಣಾಮೃತಮಹಾರ್ಣವಃ
೩೨)ಯತಿಪ್ರಣವಕಲ್ಪ:
೩೩)ಜಯಂತೀನಿರ್ಣಯಃ
೩೪)ಸದಾಚಾರಸ್ಕೃತಿಃ
೩೫)ಯಮಕಭಾರತಮ್
೩೬)ದ್ವಾದಶಸ್ತೋತ್ರಮ್
೩೭)ನಖಸ್ತುತಿ:
38)ಕುಂದುಕಸ್ತುತಿಃ
39)ಬಿಲ್ವಮಂಗಲ:ಸಾಧು
ಸರ್ವಮೂಲ ಅಭಿಯಾನದಲ್ಲಿ ಚಾಲೆಂಜ್ ಸ್ವೀಕರಿಸಿ ಪಾಲ್ಗೊಂಡ ಚೆಂದದ ಸೃಜನಶೀಲ ಕೈಬರಹವಿರುವ ಅತ್ಯುತ್ತಮವಾದ 5 ಜನರ ಫೋಟೋಗಳಿಗೆ ಆಚಾರ್ಯರ ಅನುಗ್ರಹ ರೂಪದಲ್ಲಿ ಬಹುಮಾನ ನೀಡಲಾಗುವುದು.
ಕಡ್ಡಾಯವಾಗಿ ಕೈಯಲ್ಲಿ ಬರೆದಿದ್ದೇ ಅಪ್ಲೋಡ್ ಮಾಡಬೇಕು .( ಪ್ರಿಂಟ್ ಮಾಡಿರುವುದು ಬೇಡ.)
ನಿಮ್ಮ ಮತ್ತು ನಿಮ್ಮ ಊರಿನ ಹೆಸರು ತಪ್ಪದೆ ಫೋಟೋದಲ್ಲಿ ಕಾಣುವಂತೆ ಬರೆಯಿರಿ.
ನಿಮ್ಮನ್ನು ನಾವೇ ಫೇಸ್ಬುಕ್ ಮೂಲಕ ಸಂಪರ್ಕಿಸುತ್ತೇವೆ.
ಇಂತಿ ಗುರುಮಧ್ವಮುನಿದಾಸಾನುದಾಸರು
ಶ್ರೀಮಧ್ವಾಭಿಜ್ಜ್ಞಾ ವೃಂದ
0 Comments