Header Ads Widget

ॐ GSB Madhva Bhramins ॐ

ಮೋಕ್ಷದ ಪಥ ತೋರಿದ ಸುನೀತಿಯ ಆದರ್ಶ

 ಮೋಕ್ಷದ ಪಥ ತೋರಿದ ಸುನೀತಿಯ ಆದರ್ಶ

ಈಗಿನ ಕಾಲದಲ್ಲಂತೂ ತಾಯಂದಿರು ಮಕ್ಕಳಿಗಾಗಿ ಆಭರಣ, ಮನೆ, ಭೂಮಿ, ಹಣ ಮುಂತಾವುಗಳನ್ನು ಸಂಗ್ರಹಿಸುವುದಲ್ಲಿ BUSY ಆಗಿರುತ್ತಾರೆ..ತಮ್ಮ ನಂತರ ಮಕ್ಕಳು ಯಾರಲ್ಲೂ ಕೈಚಾಚಬಾರದು. ಯಾರ ಹಂಗಲ್ಲೂ ಬೀಳಬಾರದು. ಮಕ್ಕಳಲ್ಲಿ ಸ್ವಧರ್ಮದ ಬಗೆಗೆ ಅರಿವು ಮೂಡಿಸದಿರುವುದು ಈಗಿನ TREND.
WE ARE MODERATELY ORTHODOX ಎಂದು ಹೇಳುವ ಹೆಮ್ಮೆ ಮೂಡಿದೆ.
ತಮ್ಮ ಮಕ್ಕಳ ಎದುರು ಪಾಪ-ಪುಣ್ಯ ಎಂಬ ಶಬ್ದಗಳ ಪ್ರಯೋಗವು ಇಂದು ನಿಂತುಹೋಗಿದೆ . ಮಕ್ಕಳು ಪ್ರಾಪ್ತ ವಯಸ್ಕರಾದ ಮೇಲೂ ಸಹ ಸಾವು ಹಾಗೂ ನಂತರದ ಪ್ರಯಾಣದ ವಿಷಯವನ್ನು ಅಥವಾ ಕರ್ಮದ ಸಿದ್ಧಾಂತವನ್ನು ಬೋಧಿಸಲು ಅನರ್ಹರಾಗಿದ್ದೇವೆ .ಇನ್ನೂ ಮೋಕ್ಷದ ದಾರಿಯನ್ನು ತೋರಿಸುವುದೆಂತು?
ಇಂತಹವರ ನಡುವೆ ನಮಗೆ ವಿಲಕ್ಷಣವಾಗಿ ಲಕ್ಷ್ಮಣನ ತಾಯಿ ಸುಮಿತ್ರೆ ಹಾಗೂ ಧೃವನ ತಾಯಿ ಸುನೀತಿಯರನ್ನು ಕಾಣಬಹುದು.
ಸುನೀತಿಯ ಭಗವನ್ನಿಷ್ಠೆ, ತತ್ವನಿಶ್ಚಯ, ದಾರ್ಢ್ಯ ಇವೆಲ್ಲವೂ ಅನುಕರಣೀಯ..
ಮಗನಾದ ಧ್ರುವನಿಗೆ ಪರತತ್ವದ ದಾರಿಯನ್ನು ತೋರಿಸಿದ್ದಾಳೆ. "ಮಗು, ನಿನಗಾಗಲಿ ಅಥವಾ ನನಗಾಗಲಿ ದುಃಖವನ್ನು ಪರಿಹರಿಸುವವನು ಶ್ರೀಹರಿ ಒಬ್ಬನೇ ಆಗಿದ್ದಾನೆ. ಆದ್ದರಿಂದ ನೀನು ಅವನ ಪಾದ ಪದ್ಮಗಳನ್ನು ಆರಾಧಿಸು" ಎಂದು ಧೃವನಿಗೆ ಭೋದಿಸುವಂಥ ತಾಯಿ ಇನ್ನೆಲ್ಲಿ ಕಾಣಲು ಸಾಧ್ಯ??
ಆರಾಧಯಾಧೋಕ್ಷಜ ಪಾದಪದ್ಮಂ
ಯದೀಚ್ಛಸೇsಧ್ಯಾಸನಮುತ್ತಮೋ ಯಥಾ ||೪-೯-೨೦||
ನೀನು ಕೂಡ ಸಿಂಹಾಸನ ಬಯಸುವಿಯಾದರೇ ಶ್ರೀಹರಿಯನ್ನು ಆರಾಧಿಸು.
ಯತ್ಪಾದಪದ್ಮಂ ಪರಿಚರ್ಯ ವಿಶ್ವ-
ವಿಭಾವನಾಯಾತ್ತಗುಣಾಭಿಪತ್ತೇಃ|
ಅಜೋsಧ್ಯತಿಷ್ಠತ್ ಖಲು ಪಾರಮೇಷ್ಠ್ಯಂ
ಪದಂ ಜಿತಾತ್ಮಾ ಶ್ವಸನಾಭಿವಂದ್ಯಂ ||೪-೯-೨೧||
ಪ್ರಪಂಚದ ಸೃಷ್ಟ್ಯಾದಿಗಳಿಗೆ ಸತ್ವಾದಿಗುಣಗಳನ್ನು ಪ್ರೇರಿಸುವ ಆ ಹರಿಯ ಪಾದಕಮಲವನ್ನೇ ಜಿತಮನಸ್ಕನಾದ ಬ್ರಹ್ಮ ಆರಾಧಿಸಿ ಮುಖ್ಯಪ್ರಾಣನೂ ವಂದಿಸುವಂಥ ಬ್ರಹ್ಮಪದವಿಯನ್ನು ಸಂಪಾದಿಸುತ್ತಾನೆ
ತಮೇವ ವತ್ಸಾಶ್ರಯ ಭೃತ್ಯವತ್ಸಲಂ
ಮುಮುಕ್ಷುಭಿರ್ಮೃಗ್ಯಪದಾಬ್ಜಪದ್ಧತಿಂ |
ಅನನ್ಯಭಾವೇ ನಿಜಧರ್ಮಭಾವಿತೇ
ಮನಸ್ಯವಸ್ಥಾಪ್ಯ ಭಜಸ್ವ ಪೂರುಷಮ್ ||೪- ೯- ೨೩||
ಮಗೂ ,ನೀನೂ ಭಕ್ತವತ್ಸಲನಾದ ಆ ಭಗವಂತನನ್ನೇ ಆಶ್ರಯಿಸು.ಮುಮುಕ್ಷುಗಳು ಅರಸುವುದು ಅವನ ಪಾದಕಮಲಗಳನ್ನು ಹೊಂದುವ ಮಾರ್ಗವನ್ನೇ. ಯಮಾದಿ ಯೋಗಮಾರ್ಗದಿಂದ ಮನಸ್ಸನ್ನು ನಿರ್ಮಲವಾಗಿಸಿಕೊಂಡು ಅನನ್ಯಭಕ್ತಿಭರಿತವಾದ ಆ ಮನಸ್ಸಿನಲ್ಲಿ ಭಗವಂತನ್ನು ನಿಲ್ಲಿಸಿಕೊಂಡು ಸೇವಿಸು.
ನಾನ್ಯಂ ತತಃ ಪದಪದ್ಮಪಲಾಶಲೋಚನಾದ್
ದುಃಖಚಾಛಿದಂ ತೇ ಮೃಗಯಾಮಿ ಕಂಚನ|
ಯೋ ಮೃಗ್ಯತೇ ಹಸ್ತಗೃಹೀತಪದ್ಮಯಾ
ಶ್ರಿಯೇತರೈರಂಗ ವಿಮೃಗ್ಯಮಾಣಯಾ ||೪- ೯- ೨೪||
ಆ ಕಮಲದಳನಯನನನ್ನು ಬಿಟ್ಟು ನಿನ್ನ ದುಃಖಪರಿಹಾರಕ್ಕೆ ಇನ್ನಾರನ್ನೂ ನಾ ಕಾಣೆ.
ಬ್ರಹ್ಮಾದಿದೇವತೆಗಳು ಜ್ಞಾನಭಕ್ತ್ಯಾದಿವೃದ್ಧಿಗಾಗಿ ಯಾರನ್ನು ಅರಸುವರೋ, ಆ ಮಹಾಲಕ್ಷ್ಮಿಯೂ ಕೂಡ ಭಗವಂತನಲ್ಲಿ ಹೊಸಹೊಸ ಗುಣಗಳನ್ನು ಕಂಡೊಡನೆ ಪೂಜಿಸಲು ಕಮಲ ಬೇಕೆಂದು ಕೈಯಲ್ಲಿ ಕಮಲವನ್ನು ಹಿಡಿದುಕೊಂಡೇ ಸದಾ ಆ ಗುಣಗಳನ್ನು ಅರಸುತ್ತಾಳೆ.
ಸಿಂಹಾಸನಕ್ಕಾಗಿ ಭಗವಂತನನ್ನು ಕುರಿತು ತಪಸ್ಸನ್ನಾಚರಿಸಲು ಹೇಳಿದ ಸುನೀತಿ ಧ್ರುವನಿಗಿಂತ ಮೊದಲೇ ಉತ್ತಮವಾದ ಲೋಕವನ್ನು ಹೊಂದಿದ್ದಳು ಎಂದು ಭಾಗವತ ತಿಳಿಸುತ್ತದೆ.
ಈ ರೀತಿಯಾಗಿ ಧೃವನನ್ನು ತಪಸ್ಸನ್ನಾಚರಿಸಲು ಪ್ರೇರೆಪಿಸಿದ ಸುನೀತಿ ನಮ್ಮೆಲ್ಲರ ಆದರ್ಶ.
ಶ್ರೀಕೃಷ್ಣಾರ್ಪಣಮಸ್ತು
16
1 Comment
Like
Comment

Post a Comment

0 Comments