||ಪಿಬತ ಭಾಗವತಂ ರಸಮಾಲಯಂ||
||ಗೋವಿಂದಾಯ ನಮೋ ನಮಃ|
✍️ದುಷ್ಟನಾದ ಜರಾಸಂಧನ ಬಳಿ ಒಟ್ಟು 22,800 ರಾಜರು ಸೆರೆಮನೆಯಲ್ಲಿ ಬಂಧಿತರಾಗಿ ಇದ್ದಾರೆ. ಶೈವ ಯಾಗವನ್ನು ಮಾಡಿ ಅದಕ್ಕೆ ಬಲಿಕೊಡಲು ಅಷ್ಟು ಜನ ರಾಜರ ಬಂಧನ.
ಶ್ರೀ ಕೃಷ್ಣ ಪರಮಾತ್ಮ ಭೀಮಸೇನ ಮತ್ತು ಅರ್ಜುನ ನೊಡನೆ ಅವನ ಪಟ್ಟಣಕ್ಕೆ ಹೋಗಿ ಅವನನ್ನು ಭೀಮಸೇನ ದೇವರಿಂದ ಸಂಹಾರ ಮಾಡಿಸುತ್ತಾನೆ.ಅಷ್ಟು ಜನ ರಾಜರು ಅವನು ಕೊಟ್ಟ ಕ್ರೂರ ಹಿಂಸೆಗೆ ಒಳಗಾಗಿ ಸೊರಗಿ,ಬಳಲಿದ್ದರು.
ಯಾವಾಗ ಶ್ರೀ ಕೃಷ್ಣ ಪರಮಾತ್ಮನ ದರುಶನ ವಾಯಿತೋ ಅವನ ರೂಪ ವನ್ನು ಕಣ್ಣು ಮುಚ್ಚದಂತೆ ,ನೋಡುತ್ತಾರೆ. ಮತ್ತೆ ಸಿಗುವದೋ ಇಲ್ಲ ವೋ ಈ ಭಾಗ್ಯವೆಂದು..ಸಾಷ್ಟಾಂಗ ನಮಸ್ಕಾರ🙏 ಮಾಡುತ್ತಾರೆ. ಭಗವಂತನ ದರುಶನ ದಿಂದಲೇ ಅವರ ಬಂಧನ ಪರಿಹಾರವಾಗಿದೆ.
ಈ ಸಮಯದಲ್ಲಿ ಅವರೆಲ್ಲರೂ ಸೇರಿ ಒಂದು ಪ್ರಾರ್ಥನೆ ಮಾಡುತ್ತಾರೆ.👇👇
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ|
ಪ್ರಣತಃ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ||
ಇದರ ಅರ್ಥ.
ಭೂದೇವಿಯ ವಿನಂತಿ ಯಂತೆ ಭೂಭಾರ ಇಳಿಸಿ ಭೂದೇವಿಗೆ ಆನಂದವಿತ್ತ ಕೃಷ್ಣ ನಿಗೆ,
ನಮಗೆ ಮೋಕ್ಷ ವನ್ನು ಕೊಡುವ ವಾಸುದೇವ ರೂಪಿ ಪರಮಾತ್ಮ ನಿಗೆ,ಎಲ್ಲಾ ಯಜ್ಞ ಯಾಗಾದಿಗಳಲ್ಲಿ ಒಳಗೆ ಇದ್ದು ಆಹುತಿ ಸ್ವೀಕಾರ ಮಾಡುವ ಶ್ರೀ ಹರಿಗೆ,ಇಡೀ ಪ್ರಪಂಚಕ್ಕೆ ಯಜಮಾನ ನಾದ ಆ ಪರಮಾತ್ಮನಿಗೆ, ಭಕ್ತಿ ಪೂರ್ವಕವಾಗಿ ನಮಸ್ಕಾರ ಮಾಡುವವರ ಸಂಕಷ್ಟ ಗಳನ್ನು ನಾಶಪಡಿಸುವ ಗೋವಿಂದನಿಗೆ ನಮನಗಳು ನಮನಗಳು ನಮನಗಳು.
ಇಲ್ಲಿ ಶ್ರೀ ಮದ್ಭಾಗವತ ಒಂದು ಸಂದೇಶವನ್ನು ಕೊಡುತ್ತದೆ. ಪ್ರತಿಯೊಂದು ಜೀವಿಯು ಸಂಸಾರವೆಂಬ ಜಂಜಾಟದಲ್ಲಿ ಸಿಕ್ಕಿ ಬಿದ್ದು ಒದ್ದಾಡಲೇಬೇಕು. ಈ ಅರಿಷಡ್ವರ್ಗ ಗಳೆಂಬ ವೈರಿಗಳಿಂದ ಬಳಲುವ ನಮ್ಮ ಮೇಲೆ ಸಹ ಆ ರುಕ್ಮಿಣಿ ಪತಿಯ ದೃಷ್ಟಿ ಬೀಳಬೇಕು.ಆಗ ಮಾತ್ರ ಈ ಬಂಧನದಿಂದ ನಾವುಗಳು ಮುಕ್ತಿ ಹೊಂದಲು ಸಾಧ್ಯ.
ಅವರೆಲ್ಲರೂ ಪಠಿಸಿ ಬಂಧನದಿಂದ ಮುಕ್ತಿ ಹೊಂದಿದರು.
ಅವರದ್ದಾಯಿತು.ಇನ್ನೂ ನಮ್ಮದಾಗಬೇಡವೇ!!!??.
ಪ್ರತಿ ನಿತ್ಯ ಬೆಳಿಗ್ಗೆ ಸಾಯಂಕಾಲ ಯಥಾನುಶಕ್ತಿ ಹತ್ತಕ್ಕೂ ಹೆಚ್ಚುಬಾರಿ ಈ ಶ್ಲೋಕ ವನ್ನು ಪಠಿಸೋಣ.ಭಗವಂತನ ನಾಮ ಸ್ಮರಣೆ ಮಾಡೋಣ. ಇವಾಗ ಬಂದ ಮತ್ತು ಮುಂದೆ ಬರುವ ಕಷ್ಟ, ವಿಪತ್ತು, ಆಪತ್ತು ಗಳ ಪರಿಹಾರವನ್ನು ಅವನ ದಯೆಯಿಂದ ನಿವಾರಣೆ ಮಾಡಿಕೊಳ್ಳೋಣ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಗೋವಿಂದಾಯ ನಮೋ ನಮಃ|ಗೋವಿಂದಾಯ ನಮೋ ನಮಃ🙏
🙏ಶ್ರೀ ಕೃಷ್ಣಾಯ ನಮಃ🙏
0 Comments