ಋತ್ವಿಜರು ಪುತ್ತಪ್ರಾಪ್ತಿಗಾಗಿ ಶ್ರೀ ವಿಷ್ಣುವಿನನ್ನು ಕುರಿತು ಸಮಂತ್ರ ಪುರೋಡಶವನ್ನು ಅರ್ಪಿ ಸಿದರು.
ಕೂಡಲೇ ಯಜ್ಞ ಕುಂಡದಿಂದ ದಿವ್ಯ ಪುರುಷನು ಕೈಯಲ್ಲಿ ಸುವರ್ಣ ಪಾತ್ರೆಯಲ್ಲಿ ಪಾಯಸವನ್ನು ಹಿಡಿದು ಹೊರಬಂದನು. ಆ ಪಾತ್ರೆಯನ್ನು ಬ್ರಾಹ್ಮಣರ ಆಜ್ಞೆ ಯಂತೆ ಸ್ವೀಕರಿಸಿದ ರಾಜನು ತನ್ನ ಪತ್ನಿಗೆ ನೀಡಿದನು ಅದನ್ನು ಅವಳು ಸ್ವೀಕರಿಸಿ ಗರ್ಭವತಿ ಯಾದಳು. ಅವಳಲ್ಲಿ ವೇನ ನೆಂಬ ಮಗನು ಜನಿಸಿದನು.
ಸುನೀಥಿಯೂ ಮೃತ್ಯುವಿನ ಪುತ್ರಿಯಾಗಿದ್ದರಿಂದ ಮಗ ವೇನನಿಗೆ ಹುಟ್ಟಿನಿಂದಲೇ ತಂದೆ ಮೃತ್ಯುವಿನ ಅನುಕರಣೆ ಮಾಡುತ್ತ ಅತಿಕ್ರೂರನನ್ನಾಗಿ ಮಾಡಿದಳು. ಅವನು ಬಿಲ್ಲು ಬಾಣಗಳನ್ನು ಧರಿಸಿ ಅಡವಿಯಲ್ಲಿ ತಿರಗುತ್ತ ಪ್ರಾಣಿಗಳನ್ನು ಕೊಲ್ಲುತ್ತಿದ್ದ ಆಟ ಆಡುವ ಮಕ್ಕಳ ಕತ್ತು ಹಿಸುಕಿ ಕೊಲ್ಲುತ್ತಿದ್ದ. ವೇನ ಬಂದರೆ ಎಲ್ಲರೂ ಅಂಜಿ ಮನೆ ಸೇರುತ್ತಿದ್ದರು. ಅವನನ್ನು ತಿದ್ದಬೇಕು ಎಂದು ತಂದೆ ಅಂಗರಾಜನು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ವೇನನ ದುರಾಡಳಿತಕ್ಕೆ ಬೇಸತ್ತು ಒಂದು ದಿನ ರಾತ್ರಿ ಮಲಗಿದ್ದಾಗ ಹೆಂಡತಿಯನ್ನು ಬಿಟ್ಟು ಮನೆಯಿಂದ ಅಂಗಗರಾಜನು ಹೊರಟು ಬಿಟ್ಟನು. ಮರುದಿನ ಬೆಳಗ್ಗೆ ಮಂತ್ರಿ, ಸೈನಿಕರು ಎಲ್ಲ ಕಡೆಯಲ್ಲಿ ಹುಡುಕಿದರೂ ರಾಜ ಸಿಗಲಿಲ್ಲ.
ಮಕ್ಕಳಿಗೆ ಮನೆಯಲ್ಲಿ ತಾಯಿಯಾದವಳು ಕೆಟ್ಟ ಸಂಸ್ಕಾರ ನೀಡಿದರೆ ವೇನ ನಂತೆ ಅಸುರ ಸ್ವಾಅಭಾವದವರಾಗಿ ಬೆಳೆಯುತ್ತಾರೆ ಎಂಬ ದಿವ್ಯ ಸಂದೇಶವನ್ನು ಭಾಗವತ ನೀಡಿದೆ.
ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳು ಇಬ್ಬರ ಮಾತೇ ಕೇಳುತ್ತಾರೆ. ಒಂದು ತಾಯಿ ಮಾತು, ಇನ್ನೊಂದು ಗುರುಗಳ ಮಾತು.
ಹೀಗಾಗಿ ಸಮಾಜದಲ್ಲಿತಾಯಿ ಮತ್ತು ಗುರು (ಶಿಕ್ಷಕ) ಹೇಳಿದ್ದೆ ಸತ್ಯೆ ಎಂದು ಮಕ್ಕಳು ನಂಬುತ್ತಾರೆ. ತಾಯಿ ಮತ್ತು ಗುರುಗಳು ಉತ್ತಮಮಾರ್ಗ ದರ್ಶನ ನೀಡಬೇಕು ಎಂಬ ಎಚ್ಚರಿಕೆಯೂ ಭಾಗವತ ನಮಗೆ ನೀಡಿದೆ.
ವೇನನಿಗೆ ತಾಯಿ ಕೆಟ್ಟದ್ದನ್ನೆಕಲಿಸಿದ್ದರಿಂದ ಆತ ಕ್ರೂರಿಯಾದ. ತಂದೆ ತಿದ್ದಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ತಂದೆ ಇಂಥವರ ಸಹವಾಸವೇ ಬೇಡ ಎಂದು ಕಾಡಿಗೆ ಸೇರಿದ. ಹೆಂಡತಿಯನ್ನು ಜತೆಯಲ್ಲಿ ಕರೆದುಕೊಂಡು ಹೋಗಲಿಲ್ಲ. ಯಾಕಂದರೆ ಅವಳು ಕೂಡ ಅಧರ್ಮದ ಹಾದಿಯನ್ನೆ ಹಿಡಿದವಳು. ಹೀಗಾಗಿ ಧರ್ಮವನ್ನೆ ನಂಬಿದ ರಾಜ ತಾನೊಬ್ಬನೇ ಕಾಡಿಗೆ ಹೊರಟು ಹೋದ.
ವೇನನ ದಬ್ಬಾಳಿಕೆ ಬಗ್ಗೆ ನಾಳೆ ತಿಳಿದುಕೊಳ್ಳೊಣ.
1 Comments
Good article
ReplyDelete