Header Ads Widget

ॐ GSB Madhva Bhramins ॐ

ಭಾಗವತಸಾರ- ಭರತ ಚಕ್ರವರ್ತಿ 1

 ಭಾಗವತಸಾರ-139



ಭರತ ಕಥೆ

ಮಹಾ ಭಗವದ್ಭಕ್ತನಾದ ಭರತನು ತಂದೆಯಿಂದ ಪ್ರಜಾ ಪಾಲನೆಯಲ್ಲಿ  ನಿಯುಕ್ತನಾದನು. ವಿಶ್ವರೂಪ ಪ್ರಜಾಪತಿ ಮಗಳಾದ ಪಂಚಜನಿ ಯನ್ನು ಮದುವೆಯಾಗಿ ಅವಳಲ್ಲಿ ಸುಮತಿ, ರಾಷ್ಟ್ರಭೃತ, ಸುದರ್ಶನ, ಆವರಣ ಮತ್ತು  ಧೂಮೃಕೇತು ಎಂಬ  ಐದು ಜನ ಮಕ್ಕಳನ್ನು ಪಡೆದನು.

ಭರತನು ಉತ್ತಮ ಜ್ಞಾನಿಯಾಗಿದ್ದನು. ಧರ್ಮ ದಲ್ಲಿ ನಿರತನಾಗಿ ಪ್ರಜಾಗಳನ್ನು ಪಾಲಿಸಹತ್ತಿದ. ಪಲಾಫೇಕ್ಷ ರಹಿತನಾಗಿ ಯಜ್ಞ ಗಳನ್ನು ಮಾಡಿ ಭಗವಂತನನ್ನು ಯಜಿಸಿ ಯಜ್ಞ ಫಲವನ್ನು ಪರಮಾತ್ಮನಿಗೆ  ಅರ್ಪಿಸಿದನು. ಇದರಿಂದ ಆತನ ಅಂತಃಕರಣವು ಶುದ್ಧವಾಯಿತು‌. ಭಗವಂತನು  ಭರತನ ಹೃದಯದಲ್ಲಿ ಅವಿರ್ಭೂತನಾದನು. ಅದರಿಂದ ಅವನ ಭಕ್ತಿಯೂ ಉತ್ತರೋತ್ತರ ವೃದ್ಧಿಯಾಗ ತೊಡಗಿತು.  ಈ ರೀತಿ ರಾಜರ್ಷಿ ಭರತನು ಹತ್ತು ಸಾವಿರ ವರ್ಷ  ಧರ್ಮದಿಂದ ಪೃಥ್ವಿ ಪಾಲನೆ ಮಾಡಿದನು. ನಂತರ ಅವನ ಮಕ್ಕಳಿಗೆ  ರಾಜ್ಯವನ್ನು ಹಂಚಿಕೊಟ್ಟು ತಪಸ್ಸು ಆಚರಿಸಲು ಪುಲಾಶ್ರಮಕ್ಕೆ ಹೋದನು. ಆ ಆಶ್ರಮವನ್ನು ಚಕ್ರಾಂಕಿತ ಶಾಲಿಗ್ರಾಮ ಶಿಲೆಗಳಿಂದ ಅಲಂಕರಿಸಲಾಗಿದೆ.

ಪುಣ್ಯಪ್ರದವಾದ ಗಂಡಕಿ ನದಿಯು ಪವಿತ್ರ ಗೊಳಿಸಿದೆ.

ಭರತನು, ತುಳಸಿ, ಫಲ. ಕಂದಮೂಲ ಫಲಾದಿಗಳ ನೈವೇದ್ಯಯಿಂದ  ಪರಮಾತ್ಮನನ್ನು  ಪೂಜಿಸಹತ್ತಿದನು. 

ಈ ರೀತಿ ಅನವರತವೂ ಪರಮಾತ್ಮನ ಪರಿಚರ್ಯದಲ್ಲಿಯೂ ಮತ್ತು ನಾಮ ಸ್ಮರಣೆಯಲ್ಲಿಯೂ ಅವನ ಆನಂದ ಪ್ರವಾಹವು ಉತ್ತರೋತ್ತರವಾಗಿ ಬೆಳೆಯುತ್ತ. ಅವನ ಹೃದಯವು ದ್ರವಿಭೂತವಾಗಹತ್ತಿತು. ಅವನ ಶರೀರದಲ್ಲಿ ರೋಮಾಂಚನಗಳು ಏಳಹತ್ತಿದವು. ಕಣ್ಣಿನಿಂದ ಆನಂದಾಶ್ರು ಧಾರೆಗಟ್ಟಿತು.ಶ್ರೀ ಹರಿಯನ್ನು ಕುರಿತು ವ್ರತ, ತ್ರಿಕಾಲ ಸ್ನಾನ, ಪೂಜೆ , ಜಪಾದಿಗಳಿಂದ ಭರತನ ಶರೀರ ಅಗ್ನಿಯಂತೆ ಹೊಳೆಯುತಿತ್ತು. 

ಒಂದು ದಿನ ಪ್ರಾತಃ ಕಾಲದಲ್ಲಿ ಸೂರ್ಯೋದಯ ಕಾಲದಲ್ಲಿ ಮಂತ್ರ ಪಠಿಸಿದನು.

ಈ ರೀತಿ ಭಗವಂತ ಸೇವೆಯಲ್ಲಿತೊಡಗಿಕೊಂಡನು.

ಶಾಮಸುಂದರ ಕುಲಕರ್ಣಿ, ಕಲಬುರಗಿ {9886465925}

Post a Comment

0 Comments