🌸🌸🌸🌸🌸
ಅಕ್ಷಯ ತೃತೀಯ
🌸🌸🌸🌸🌸
ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಂದು ಅಕ್ಷಯತದಿಗೆಯನ್ನು ಆಚರಿಸಲಾಗುತ್ತದೆ.
ಈ ದಿನ ಸೂರ್ಯ – ಚಂದ್ರರು ತಮ್ಮ ಗರಿಷ್ಠತಮ ಕಾಂತಿ ಹೊಂದುವುದರಿಂದ ದಿನವಿಡೀ ಮಂಗಳಕರವೇ!
ಅಕ್ಷರಾಭ್ಯಾಸ, ಮದುವೆ, ಮುಂಜಿ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಚಿನ್ನ-ಬೆಳ್ಳಿ ಖರೀದಿಗೂ ಸೂಕ್ತವೆಂದು ಭಕ್ತರಲ್ಲಿ ನಂಬಿಕೆ. ಈ ದಿನ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ.
• ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಆರಂಭಿಸಿದರಂತೆ.
• ಶ್ರೀ ಮಹಾವಿಷ್ಣುವಿನ ಅವತಾರವೆನಿಸಿದ ಪರಶುರಾಮನ ಜನನ ಇದೇ ದಿನವೆಂದು ಪ್ರತೀತಿ.
• ಶ್ರೀಕೃಷ್ಣನ ಅಣ್ಣನಾದ ಬಲರಾಮ ಜನನ.
• ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ಕೊಡುಗೆಯಾಗಿತ್ತ ದಿನ ಅಕ್ಷಯ ತದಿಗೆ.
• ಜನ್ಮಾಂತರಗಳ ಪಾಪ, ದೋಷಗಳನ್ನು ತೊಳೆಯಿುವ ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದ ದಿನವಿದು.
• ಸಂಪತ್ತಿನ ಒಡೆಯ, ದೇವತೆಗಳಲ್ಲೆಲ್ಲಾ ಅತಿ ಸಿರಿವಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜ ಕುಬೇರ, ಮಹಾಲಕ್ಷ್ಮಿಯ ಪೂಜೆ ಮಾಡುವ ಶುಭದಿನ ಈ ಅಕ್ಷಯತದಿಗೆ.
• ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ.
• ಇಂದಿನ ಶುಭ ದಿನದಂದೇ ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಿಸಿದ ದಿನ.
ಅಕ್ಷಯ ತೃತಿಯ
ಪುರಾತನ ಕಾಲದಿಂದಲೂ ಸ್ವರ್ಣಶಿಲ್ಪಿಗಳು ಮಾಡಿಕೊಂಡು ಬಂದಿದ್ದ ಹಬ್ಬವಾಗಿತ್ತು,
ಲಂಕನಗರವು ಯಾರದು ಎಂದು ಕೕೆಳಿದರೆ ಎಲ್ಲರು ಕೊಡುವ ಉತ್ತರ ರಾವಣ ಅಂತ, ನಿಜವಾಗಿ ಲಂಕನಗರವನ್ನ ನಿರ್ಮಿಸಿದವನು ರಾವಣನ ಅಣ್ಣ ಕುಭೇರ,
ರಾವಣ ಅಣ್ಣನಿಂದ, ಲಂಕನಗರವನ್ನ
ಕಿತ್ತುಕೊಂಡ ಹೀಗೆ ಕುಭೇರನು ಲಂಕನಗರವನ್ನ ನಿರ್ಮಾಣ ಮಾಡುವಾಗ ಅಕ್ಷಯತೃತಿಯದಂದು ಸುವರ್ಣ ವಿಶ್ವಕರ್ಮರಿಂದ ಲಂಕನಗರ ನಿರ್ಮಾಣಕ್ಕೆ ಭೂಮಿಪೂಜೆಯನ್ನ ಮಾಡಲಾಗುತ್ತೕದೆ,
ಇದರಿಂದ ಲಂಕನಗರವೆ ಸ್ವರ್ಣ ಮಾಯವಾಗುತ್ತದೆ ಎಂದು ರಾಮಯಣದಲ್ಲಿ ಹೇಳಿದೆ.
ಅಕ್ಷಯತೃತಿಯ ದಿನ ಸ್ವರ್ಣವನ್ನ ಕರಿದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂದು ನಂಬಿಕೆ.
, ನೀರು ಗಾಳಿ, ಬೆಳಕು, ಎಲ್ಲೆಲ್ಲಿಯು ತನ್ನ ಇರುವಿಕೆ ಇರುವ "ವಿಶ್ವಕರ್ಮಪರಬ್ರಹ್ಮ"ನ ವಂಶಜರಾದ
ಸ್ವರ್ಣಕ್ಕೆ ಅಧಿಪತಿ "ಸುಪರ್ಣಸ ವಿಶ್ವಕರ್ಮ" .
ಎಲ್ಲರಿಗೂ ಸುವರ್ಣ ಅಕ್ಷಯ ತೃತೀಯ ಶುಭವಾಗಲಿ.
0 Comments